ಫುಟ್‌ಬಾಲ್
ಸಾವೊ ಪೌಲೊ: ಕೆಲವು ಪಂದ್ಯಗಳಲ್ಲಿ ನಿರಾಶಾದಾಯಕ ಫಲಿತಾಂಶಗಳ ನಂತರ ಫುಟ್‌ಬಾಲ್ ಕೋಚ್ ಡೊರಿವಲ್ ಜೂನಿಯರ್ ಅವರನ್ನು ರಾಷ್ಟ್ರೀಯ ತಂಡದ ಕೋಚ್ ಸ್ಥಾನದಿಂದ ಬ್ರೆಜಿಲ್ ಕೈಬಿಟ್ಟಿದೆ.
ಬ್ಯೂನೊ ಏರ್ಸ್‌ನಲ್ಲಿ ನಡೆದ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಅರ್ಜೆಂಟೀನಾ ಕೈಲಿ 4–1 ರಿಂದ ಸೋಲನುಭವಿಸಿತ್ತು. 62 ವರ್ಷ ವಯಸ್ಸಿನ 14 ತಿಂಗಳಿಂದ ಈ ಹುದ್ದೆಯಲ್ಲಿದ್ದರು. ಅವರ ತರಬೇತಿಯಡಿ ಬ್ರೆಜಿಲ್ ಏಳು ಗೆದ್ದು, ಏಳು ಡ್ರಾ ಮಾಡಿಕೊಂಡಿದೆ. ಎರಡು ಸೋತಿದೆ. ಆದರೆ ಕೊನೆಯ ನಾಲ್ಕು ಪಂದ್ಯಗಳಲ್ಲಿ ಒಂದು ಮಾತ್ರ ಗೆದ್ದಿದೆ.
2026ರ ವಿಶ್ವಕಪ್‌ಗೆ ದಕ್ಷಿಣ ಅಮೆರಿಕನ್ ಅರ್ಹತಾ ಸುತ್ತಿನಲ್ಲಿ ಬ್ರೆಜಿಲ್ ಐದನೇ ಸ್ಥಾನದಲ್ಲಿದೆ. ಅಗ್ರ ಆರು ತಂಡಗಳು ಅರ್ಹತೆ ಪಡೆಯುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.