ADVERTISEMENT

ಡುರಾಂಡ್ ಕಪ್‌: ಎಂಟರ ಘಟ್ಟಕ್ಕೆ ಜಮ್ಷೆಡ್‌ಪುರ ಎಫ್‌ಸಿ

ಪಿಟಿಐ
Published 8 ಆಗಸ್ಟ್ 2025, 16:19 IST
Last Updated 8 ಆಗಸ್ಟ್ 2025, 16:19 IST
<div class="paragraphs"><p>ಫುಟ್‌ಬಾಲ್‌</p></div>

ಫುಟ್‌ಬಾಲ್‌

   

ಜಮ್‌ಶೆಡ್‌ಪುರ: ಜಮ್ಷೆಡ್‌ಪುರ ಎಫ್‌ಸಿ ತಂಡ, 134ನೇ ಡುರಾಂಡ್ ಕಪ್ ಫುಟ್‌ಬಾಲ್‌ ಟೂರ್ನಿಯ ‘ಸಿ’ ಗುಂಪಿನ ಪಂದ್ಯದಲ್ಲಿ ಶುಕ್ರವಾರ 1 ಲಡಾಖ್‌ ಎಫ್‌ಸಿ ತಂಡವನ್ನು 2–0 ಗೋಲುಗಳಿಂದ ಸೋಲಿಸಿತು. ಗುಂಪಿನಲ್ಲಿ ಸತತ ಮೂರನೇ ಗೆಲುವಿನೊಡನೆ ಕ್ವಾರ್ಟರ್‌ಫೈನಲ್‌ಗೆ ಸ್ಥಾನ ಕಾದಿರಿಸಿತು.

28ನೇ ನಿಮಿಷ, ಎದುರಾಳಿ ರಕ್ಷಣೆ ಆಟಗಾರ ಸಿಜು ಅವರ ಉಡುಗೊರೆ ಗೋಲಿನಿಂದ ಜಮ್ಷೆಡ್‌ಪುರ ತಂಡ ಮುನ್ನಡೆ ಸಾಧಿಸಿತು. 46ನೇ ನಿಮಿಷ ಪ್ರಫುಲ್‌ ಗೋಲು ಗಳಿಸಿ ತಂಡದ ಮುನ್ನಡೆ ಹೆಚ್ಚಿಸಿದರು.

ADVERTISEMENT

ಶನಿವಾರ ಎರಡು ಪಂದ್ಯಗಳು ನಡೆಯಲಿದ್ದು ನಾಕೌಟ್‌ಗೆ ಸ್ಥಾನ ಪಡೆಯಲು ಪೈಪೋಟಿಯಿದೆ. ಕೋಲ್ಕತ್ತದ ಯುವಭಾರತಿ ಕ್ರೀಡಾಂಗಣದಲ್ಲಿ ರಾತ್ರಿ 7 ಗಂಟೆಗೆ ನಡೆಯುವ ‘ಬಿ’ ಗುಂಪಿನ ಪಂದ್ಯದಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಡೈಮಂಡ್‌ ಹಾರ್ಬರ್ ತಂಡವು ಇನ್ನೊಂದು ಸ್ಥಳೀಯ ತಂಡ ಹಾಗೂ ಐಎಸ್‌ಎಲ್‌ ಚಾಂಪಿಯನ್‌ ಮೋಹನ್ ಬಾಗನ್ ತಂಡವನ್ನು ಎದುರಿಸಲಿದ.

ಅಸ್ಸಾಮಿನ ಕೊಕ್ರಜಾರ್‌ನಲ್ಲಿ ಸಂಜೆ 4 ಗಂಟೆಗೆ ನಡೆಯಲಿರುವ ಡಿ ಗುಂಪಿನ ಪಂದ್ಯದಲ್ಲಿ, ಸ್ಥಳೀಯ ಬೋಡೊಲ್ಯಾಂಡ್‌ ಎಫ್‌ಸಿ ತಂಡವು, ಪಂಜಾಬ್‌ ಎಫ್‌ಸಿ ತಂಡವನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.