ಫುಟ್‌ಬಾಲ್
ಬೆಂಗಳೂರು: ಡಿವೈಇಎಸ್ ಎಫ್‌ಸಿ ತಂಡ 1–0 ಗೋಲಿನಿಂದ ಬಿಡಿಎಫ್‌ಎ ಎ ಡಿವಿಷನಲ್ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಬ್ಲಿಟ್ಜ್ ಎಫ್‌ಸಿ ವಿರುದ್ಧ ಜಯಿಸಿತು.
ಅಶೋಕ ನಗರದ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡಿವೈಇಎಸ್ ಎಫ್‌ಸಿ ಪರ ಸಚಿನ್ ಗುಡ್ಡಾದಾ ಯೆಲ್ಲಾಪವಾರ್ (80ನೇ ನಿ.) ಗೋಲು ಗಳಿಸಿದರು.
ಇನ್ನೊಂದು ಪಂದ್ಯದಲ್ಲಿ ಆದಾಯ ತೆರಿಗೆ ಎಫ್‌ಸಿ ತಂಡ 2–1 ಗೋಲುಗಳಿಂದ ಸ್ನೈಪರ್ಸ್ ಎಫ್‌ಸಿ ವಿರುದ್ಧ ಗೆಲುವು ಸಾಧಿಸಿತು. ಆದಾಯ ತೆರಿಗೆ ಎಫ್‌ಸಿ ತಂಡದ ಪರ ಪಾಂಡ್ಯನ್ ಎಂ.(8ನೇ ನಿ.) ಮತ್ತು ಪ್ರಶಾಂತ್ ಕಾಳಿಂಗ್ (40+2ನೇ ನಿ.) ಗೋಲುಗಳನ್ನು ಹೊಡೆದರು. ಸ್ನೈಪರ್ಸ್ ತಂಡದ ಪರ ನಿಕೇಶ್ ಥೊಗೊಖೊಮ್ (5ನೇ ನಿ.) ಗೋಲು ಗಳಿಸಿದರು.
ಸಿ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಸಾಂಬಾ ಎಫ್‌ಸಿ ತಂಡ 5–0 ಗೋಲುಗಳಿಂದ ಬಸವೇಶ್ವರನಗರ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಎರಡನೇ ಪಂದ್ಯದಲ್ಲಿ ಬ್ಲ್ಯಾಕ್ ಮೂನ್ ಎಫ್‌ಸಿ 1–1 ಗೋಲುನಿಂದ ಕರ್ನಾಟಕ ಸ್ಪೋರ್ಟ್ಸ್ ತಂಡದ ವಿರುದ್ಧ ಡ್ರಾ ಸಾಧಿಸಿತು. ಮೂರನೇ ಪಂದ್ಯದಲ್ಲಿ ಆನ್ಶ್ ಸ್ಪೋರ್ಟ್ಸ್ ಕ್ಲಬ್ 4–0 ಗೋಲುಗಳಿಂದ ರೆಬೆಲ್ಸ್ ಫೋನಿಕ್ಸ್ ಎಫ್‌ಸಿ ವಿರುದ್ಧ ಜಯಿಸಿತು. ನಾಲ್ಕನೆ ಪಂದ್ಯದಲ್ಲಿ ಬೆಂಗಳೂರು ಫೂಟೀಸ್ 1–0 ಗೋಲಿನಿಂದ ಜಿಆರ್‌ಕೆ ಎಫ್‌ಸಿ ವಿರುದ್ಧ ಜಯಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.