ADVERTISEMENT

ಡುರಾಂಡ್‌ ಕಪ್‌: 23ರಂದು ಉದ್ಘಾಟನಾ ಪಂದ್ಯ

ಪಿಟಿಐ
Published 7 ಜುಲೈ 2025, 15:51 IST
Last Updated 7 ಜುಲೈ 2025, 15:51 IST
   

ಕೋಲ್ಕತ್ತ: ಈಸ್ಟ್ ಬೆಂಗಾಲ್ ಎಫ್‌ಸಿ ಮತ್ತು ಸೌತ್ ಯುನೈಟೆಡ್ ಎಫ್‌ಸಿ ಬೆಂಗಳೂರು ತಂಡಗಳು ಇದೇ 23ರಂದು ಇಲ್ಲಿನ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆಯಲಿರುವ 134ನೇ ಆವೃತ್ತಿಯ ಡುರಾಂಡ್ ಕಪ್ ಫುಟ್‌ಬಾಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ದೇಶದ ಆರು ನಗರಗಳಲ್ಲಿ ಒಟ್ಟು 43 ಪಂದ್ಯಗಳು ನಡೆಯಲಿದ್ದು, ಫೈನಲ್‌ ಹಣಾಹಣಿ ಆಗಸ್ಟ್ 23ರಂದು ನಡೆಯಲಿದೆ. 24 ತಂಡಗಳನ್ನು ತಲಾ ನಾಲ್ಕರಂತೆ ಆರು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ತಂಡವು ಗುಂಪು ಹಂತದಲ್ಲಿ ಇತರ ಮೂರು ತಂಡಗಳೊಂದಿಗೆ ಒಮ್ಮೆ ಮುಖಾಮುಖಿಯಾಗಲಿದೆ.

ಆರು ಗುಂಪುಗಳಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು ಮತ್ತು ಎರಡನೇ ಸ್ಥಾನ ಪಡೆಯುವ ಎರಡು ಅತ್ಯುತ್ತಮ ತಂಡಗಳು ಕ್ವಾರ್ಟರ್‌ ಫೈನಲ್‌ಗೆ ಮುನ್ನಡೆಯಲಿವೆ. ಎಂಟರ ಘಟ್ಟದ ಪಂದ್ಯಗಳು ಆಗಸ್ಟ್ 16 ಮತ್ತು 17ರಂದು ನಿಗದಿಯಾಗಿವೆ. 19 ಮತ್ತು 20ರಂದು ಸೆಮಿಫೈನಲ್‌ ಪಂದ್ಯಗಳು ನಡೆಯಲಿವೆ. ನಾಕೌಟ್‌ ಸುತ್ತಿನ ಪಂದ್ಯಗಳ ಸ್ಥಳಗಳನ್ನು ನಂತರ ಘೋಷಿಸಲಾಗುತ್ತದೆ. 

ADVERTISEMENT

ಹಾಲಿ ಚಾಂಪಿಯನ್ ನಾರ್ತ್‌ ಈಸ್ಟ್ ಯುನೈಟೆಡ್ ಎಫ್‌ಸಿ ತಂಡವು ಆಗಸ್ಟ್ 2ರಂದು ಫಾರಿನ್ ಸರ್ವೀಸಸ್ ತಂಡದ ವಿರುದ್ಧ ಅಭಿಯಾನ ಆರಂಭಿಸಲಿದೆ. ಕಳೆದ ಆವೃತ್ತಿಯ ಫೈನಲ್‌ನಲ್ಲಿ ನಾರ್ತ್‌ ಈಸ್ಟ್‌ ತಂಡವು 17 ಬಾರಿಯ ಚಾಂಪಿಯನ್‌ ಮೋಹನ್‌ ಬಾಗನ್‌ ಸೂಪರ್‌ ಜೈಂಟ್ಸ್‌ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಮಣಿಸಿ ಚೊಚ್ಚಲವಾಗಿ ಪ್ರಶಸ್ತಿ ಗೆದ್ದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.