ADVERTISEMENT

ಫುಟ್‌ಬಾಲ್‌: ರೊನಾಲ್ಡೊ ಕಾಲ್ಚಳಕ

ಏಜೆನ್ಸೀಸ್
Published 12 ಅಕ್ಟೋಬರ್ 2019, 19:45 IST
Last Updated 12 ಅಕ್ಟೋಬರ್ 2019, 19:45 IST
ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ (ಕೆಂಪು ಪೋಷಾಕು) ಗೋಲು ಗಳಿಸಲು ಪ್ರಯತ್ನಿಸಿದರು –ಎಎಫ್‌ಪಿ ಚಿತ್ರ
ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ (ಕೆಂಪು ಪೋಷಾಕು) ಗೋಲು ಗಳಿಸಲು ಪ್ರಯತ್ನಿಸಿದರು –ಎಎಫ್‌ಪಿ ಚಿತ್ರ   

ಲಿಸ್ಬನ್‌: ಕ್ರಿಸ್ಟಿಯಾನೊ ರೊನಾಲ್ಡೊ ಅವರು ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ‘ಶತಕ’ ದಾಖಲಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಪೋರ್ಚುಗಲ್‌ನ ಈ ಆಟಗಾರ, ಶುಕ್ರವಾರ ನಡೆದ ಯುರೋಪಿಯನ್‌ ಚಾಂಪಿಯನ್‌ಷಿಪ್‌ನ ಅರ್ಹತಾ ಟೂರ್ನಿಯ ಲಕ್ಸೆಮ್‌ಬರ್ಗ್‌ ಎದುರಿನ ಪಂದ್ಯದಲ್ಲಿ ಗೋಲು ಬಾರಿಸಿದರು. ‘ಬಿ’ ಗುಂಪಿನ ಈ ಹೋರಾಟದಲ್ಲಿ ಪೋರ್ಚುಗಲ್‌ 3–0 ಗೋಲುಗಳಿಂದ ಗೆದ್ದಿತು.

ರೊನಾಲ್ಡೊ ಅವರು ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ದಾಖಲಿಸಿದ 94ನೇ ಗೋಲು ಇದಾಗಿದೆ. ವೃತ್ತಿಬದುಕಿನಲ್ಲಿ ಅವರು ಬಾರಿಸಿದ ಒಟ್ಟಾರೆ 699ನೇ ಗೋಲು ಇದು.

ADVERTISEMENT

4-3-3 ಯೋಜನೆಯೊಂದಿಗೆ ಕಣಕ್ಕಿಳಿದಿದ್ದ ಪೋರ್ಚುಗಲ್‌, 16ನೇ ನಿಮಿಷದಲ್ಲಿ ಖಾತೆ ತೆರೆಯಿತು. ಬರ್ನಾರ್ಡೊ ಸಿಲ್ವ ಗೋಲು ಹೊಡೆದರು.

65ನೇ ನಿಮಿಷದಲ್ಲಿ ಕಾಲ್ಚಳಕ ತೋರಿದ ರೊನಾಲ್ಡೊ 2–0 ಮುನ್ನಡೆಗೆ ಕಾರಣರಾದರು. 89ನೇ ನಿಮಿಷದಲ್ಲಿ ಮುಂಚೂಣಿ ವಿಭಾಗದ ಆಟಗಾರ ಗೊಂಕ್ಯಾಲೊ ಗುಯಿಡೆಸ್‌ ಗೋಲು ಹೊಡೆದು ಗೆಲುವಿನ ಅಂತರ ಹೆಚ್ಚಿಸಿದರು.

ಪ್ಯಾರಿಸ್‌ನಲ್ಲಿ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಜೆಕ್‌ ಗಣರಾಜ್ಯ 2–1 ಗೋಲುಗಳಿಂದ ಇಂಗ್ಲೆಂಡ್‌ಗೆ ಆಘಾತ ನೀಡಿತು.

‘ಎಚ್‌’ ಗುಂಪಿನ ಪಂದ್ಯದಲ್ಲಿ ಫ್ರಾನ್ಸ್‌ 1–0 ಗೋಲಿನಿಂದ ಐಸ್‌ಲ್ಯಾಂಡ್‌ ತಂಡವನ್ನು ಮಣಿಸಿತು. 66ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಒಲಿವಿಯರ್‌ ಗಿರೌಡ್‌, ಗೆಲುವಿನ ರೂವಾರಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.