ADVERTISEMENT

ಫುಟ್‌ಬಾಲ್‌: ಅನಿಲ್ ಶಂಕರ್ ಹ್ಯಾಟ್ರಿಕ್‌

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 19:31 IST
Last Updated 6 ಜೂನ್ 2022, 19:31 IST

ಬೆಂಗಳೂರು: ಅನಿಲ್ ಶಂಕರ್ ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದತಿಲಕ್ ಮೆಮೊರಿಯಲ್ ಎಫ್‌ಸಿ ಬಿಡಿಎಫ್‌ಎ ಬಿ ಡಿವಿಷನ್‌ ಫುಟ್‌ಬಾಲ್ ಟೂರ್ನಿಯಲ್ಲಿ ಭರ್ಜರಿ ಜಯ ಗಳಿಸಿತು.

ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿತಿಲಕ್ ಮೆಮೊರಿಯಲ್ 6–2ರಿಂದ ಆರ್‌.ಎಸ್‌. ಸ್ಪೋರ್ಟ್ಸ್ ಎದುರು ಗೆದ್ದಿತು. ಅನಿಲ್‌ 11, 21 ಮತ್ತು 27ನೇ ನಿಮಿಷಗಳಲ್ಲಿ ಕಾಲ್ಚಳಕ ತೋರಿದರು. ವಿಜೇತ ತಂಡದ ‍ಪ್ರವೀಣ್ ಪಿ. (12ನೇ ನಿಮಿಷ), ನೂತನ್ ಪಿ. (35+1ನೇ ನಿ.) ಮತ್ತು ಯತಿ ವಿಶ್ವನಾಥನ್ (70+1ನೇ ನಿ.) ಗೋಲು ಹೊಡೆದರು. ಆರ್‌.ಎಸ್‌. ಸ್ಪೋರ್ಟ್ಸ್ ಪರ ಸಂದೀಪ್ ಕೃಷ್ಣನ್‌ (8 ಮತ್ತು 30ನೇ ನಿ.) ಎರಡು ಗೋಲು
ದಾಖಲಿಸಿದರು.

ಮತ್ತೊಂದು ಪಂದ್ಯದಲ್ಲಿ ಎ.ವಾಸೀಂ ಗಳಿಸಿದ ಹ್ಯಾಟ್ರಿಕ್‌ ಗೋಲುಗಳು ಬೆಂಗಳೂರು ಮಾರ್ಸ್ ಎಫ್‌ಸಿ ತಂಡದ ಗೆಲುವಿಗೆ ಕಾರಣವಾದವು. ತಂಡವು 6–0ಯಿಂದ ವೆಹಿಕಲ್ ಎಫ್‌ಸಿ ತಂಡವನ್ನು ಸೋಲಿಸಿತು. ವಾಸೀಂ 11, 21 ಮತ್ತು 31ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು. ಆರ್‌. ರಾಬಿನ್ಸನ್‌ (46 ಮತ್ತು 51ನೇ ನಿ.) ಮತ್ತು ಜಾನ್ ಗಿಲ್ಬರ್ಡ್‌ (61ನೇ ನಿ.) ಕೂಡ ಮಿಂಚಿದರು. ಇನ್ನುಳಿದ ಪಂದ್ಯಗಳಲ್ಲಿ ರೈಸ್‌ ಎಫ್‌ಸಿ 2–2ರಿಂದ ಶ್ರೀ ಗಜಾನನ ಎಫ್‌ಸಿಯೊಂದಿಗೆ ಮತ್ತು ಸೌಥ್ ಇಂಡಿಯನ್‌ ಎಫ್‌ಸಿ 1–1ರಿಂದ ಡಿವೈಇಎಸ್‌ ಎಫ್‌ಸಿಯೊಂದಿಗೆ ಡ್ರಾ ಸಾಧಿಸಿದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.