ಬೆಂಗಳೂರು: ನಿಖಿಲ್‌ರಾಜ್ ಮುರುಗೇಶ್‌ಕುಮಾರ್ (49ನೇ ನಿ., 63ನೇ ನಿ., 80ನೇ ನಿ. ಹಾಗೂ 88ನೇ ನಿ.) ಅವರ ಮಿಂಚಿನ ಆಟದ ನೆರವಿನಿಂದ ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡವು ಕೆಎಸ್‌ಎಫ್‌ಎ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 8–0 ಗೋಲುಗಳಿಂದ ಎಂಎಫ್‌ಎಆರ್ ಸ್ಟುಡೆಂಟ್ಸ್ ಯೂನಿಯನ್ ತಂಡದ ಎದುರು ಸುಲಭ ಜಯ ದಾಖಲಿಸಿತು.
ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ನಿಖಿಲ್‌ರಾಜ್ ನಾಲ್ಕು ಗೋಲು ಗಳಿಸಿ ಪಾರಮ್ಯ ಮೆರೆದರು. ಅವರಿಗೆ ವಿದ್ಯಾನಂದ ಸಿಂಗ್ (45+5ನೇ ನಿ.), ಲಿಜೊ ಕೆ. (50ನೇ ನಿ.) ಹಾಗೂ ಮೊಹಮ್ಮದ್ ಅತ್ಲಾಬ್ ಹುಸೇನ್ (51ನೇ ನಿ.) ಬೆಂಬಲ ನೀಡಿದರು. ಎಂಎಫ್‌ಎಆರ್ ತಂಡದ ಲಾಂಖೊಲೆನ್ ಡೌಂಗೆಲ್ (60ನೇ ನಿ.) ಎದುರಾಳಿ ತಂಡಕ್ಕೆ ಉಡುಗೊರೆ ಗೋಲು ನೀಡಿದರು.
ಇನ್ನೊಂದು ಪಂದ್ಯದಲ್ಲಿ ಎಎಸ್‌ಸಿ & ಸೆಂಟರ್ ತಂಡವು 3–2ರಿಂದ ಭರತ್ ಬೆಂಗಳೂರು ಎಫ್‌ಸಿ ತಂಡವನ್ನು ಸೋಲಿಸಿತು. ಎಎಸ್‌ಸಿ & ಸೆಂಟರ್ ತಂಡದ ವಿವೇಕ್ ಶೀಲ್ ಹೆಮ್ರಾನ್ (18ನೇ ನಿ.), ಟೋನಿ ಹ್ಯುದ್ರೋಮ್ (87ನೇ ನಿ.) ಹಾಗೂ ಶೈಜು ಎಸ್. (88ನೇ ನಿ.) ತಲಾ ಒಂದು ಗೋಲು ಹೊಡೆದರು. ಭರತ್ ತಂಡದ ವಿಶಾಲ್ ಬಿ. (84ನೇ ನಿ.) ಹಾಗೂ ಮಿಚಿ ಮ್ಯುಡೊ (90+1ನೇ ನಿ.) ತಲಾ ಒಂದು ಗೋಲು ದಾಖಲಿಸಿದರು.
ದಿನದ ಮತ್ತೊಂದು ಪಂದ್ಯದಲ್ಲಿ ಎಂಇಜಿ & ಸೆಂಟರ್ ಎಫ್‌ಸಿ ಹಾಗೂ ಎಫ್‌ಸಿ ರಿಯಲ್ ಬೆಂಗಳೂರು ತಂಡಗಳು 1–1ರಿಂದ ಸಮಬಲ ಸಾಧಿಸಿದವು. ಎಂಇಜಿ & ಸೆಂಟರ್ ತಂಡದ ಶರತ್ ನಾರಾಯಣನ್ ಎಂ. (73ನೇ ನಿ.) ಮತ್ತು ರಿಯಲ್ ಬೆಂಗಳೂರು ತಂಡದ ಆರ್. ಕಾರ್ತಿಕೇಯನ್ (18ನೇ ನಿ.) ತಲಾ ಒಂದು ಗೋಲು ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.