ADVERTISEMENT

FIFA World Cup: ಮೂರು ಖಂಡಗಳ 6 ದೇಶಗಳಲ್ಲಿ 2030ರ ಫುಟ್‌ಬಾಲ್ ವಿಶ್ವಕಪ್ ಆಯೋಜನೆ

ರಾಯಿಟರ್ಸ್
Published 5 ಅಕ್ಟೋಬರ್ 2023, 3:17 IST
Last Updated 5 ಅಕ್ಟೋಬರ್ 2023, 3:17 IST
<div class="paragraphs"><p>2030ರ ಫುಟ್‌ಬಾಲ್ ವಿಶ್ವಕಪ್‌ ಆತಿಥ್ಯ ವಹಿಸುವ ರಾಷ್ಟ್ರಗಳು</p></div>

2030ರ ಫುಟ್‌ಬಾಲ್ ವಿಶ್ವಕಪ್‌ ಆತಿಥ್ಯ ವಹಿಸುವ ರಾಷ್ಟ್ರಗಳು

   

ಚಿತ್ರಕೃಪೆ: Twitter / @fifamedia

ರಿಯಾದ್ (ಸೌದಿ ಅರೇಬಿಯಾ): 2030ರಲ್ಲಿ ಫುಟ್‌ಬಾಲ್ ವಿಶ್ವಕಪ್‌ ಟೂರ್ನಿಯನ್ನು ಮೂರು ಖಂಡಗಳ ಆರು ದೇಶಗಳ ಆತಿಥ್ಯದಲ್ಲಿ ನಡೆಸಲು ಫಿಫಾ ಹಾಗೂ ಜಗತ್ತಿನ ವಿವಿಧ ಸಾಕರ್‌ ತಂಡಗಳು ಸಮ್ಮತಿಸಿವೆ.

ADVERTISEMENT

ಸ್ಪೇನ್‌, ಪೋರ್ಚುಗಲ್‌, ಮೊರೊಕ್ಕೊ, ಅರ್ಜೆಂಟಿನಾ, ಪೆರುಗ್ವೆ ಹಾಗೂ ಉರುಗ್ವೆ ದೇಶಗಳು ವಿಶ್ವಕಪ್‌ಗೆ ಆತಿಥ್ಯ ವಹಿಸಲಿವೆ. ಈ ಪೈಕಿ ಅರ್ಜೆಂಟಿನಾ, ಪೆರುಗ್ವೆ, ಉರುಗ್ವೆ ದಕ್ಷಿಣ ಅಮೆರಿಕ ಖಂಡಕ್ಕೆ ಸೇರಿದ ದೇಶಗಳಾದರೆ, ಸ್ಪೇನ್‌ ಮತ್ತು ಪೋರ್ಚುಗಲ್‌ ಯುರೋಪ್‌ ಖಂಡಖಂಡದಲ್ಲಿವೆ. ಮೊರೊಕ್ಕೊ ಆಫ್ರಿಕಾ ಖಂಡಕ್ಕೆ ಸೇರಿದೆ.

ವಿಶ್ವಕಪ್‌ ಟೂರ್ನಿಗೆ ಆತಿಥ್ಯ ವಹಿಸುತ್ತಿರುವ ಉತ್ತರ ಆಫ್ರಿಕಾದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಮೊರೊಕ್ಕೊ ಭಾಜನವಾಗಿದೆ.

ಫಿಫಾ, ಆತಿಥೇಯ ದೇಶಗಳ ತಂಡಗಳಿಗೆ ಅರ್ಹತಾ ಪಂದ್ಯಗಳಲ್ಲಿ ಕಣಕ್ಕಿಳಿಯದೇ ಟೂರ್ನಿಗೆ ಪ್ರವೇಶಾವಕಾಶ ನೀಡಿದೆ.

1930ರಲ್ಲಿ ಚೊಚ್ಚಲ ವಿಶ್ವಕಪ್‌ ಉರುಗ್ವೆ ದೇಶದಲ್ಲಿ ನಡೆದಿತ್ತು. ಆ ಟೂರ್ನಿಯ 100ನೇ ವರ್ಷಾಚರಣೆಯನ್ನು ಸಂಭ್ರಮಿಸುವ ನಿಟ್ಟಿನಲ್ಲಿ 2030 ವಿಶ್ವಕಪ್‌ನ ಫೈನಲ್‌ ಪಂದ್ಯವನ್ನು ಅದೇ ದೇಶದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.

ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೋ ಅವರು, '2030ರಲ್ಲಿ ಫಿಫಾ ವಿಶ್ವಕಪ್‌ನ ಶತಮಾನೋತ್ಸವವನ್ನು ನಾವು ಮೂರು ಖಂಡಗಳು (ಆಫ್ರಿಕಾ, ಯುರೋಪ್ ಮತ್ತು ದಕ್ಷಿಣ ಅಮೆರಿಕ) ಆರು ರಾಷ್ಟ್ರಗಳಲ್ಲಿ (ಸ್ಪೇನ್‌, ಪೋರ್ಚುಗಲ್‌, ಮೊರೊಕ್ಕೊ, ಅರ್ಜೆಂಟಿನಾ, ಪೆರುಗ್ವೆ ಹಾಗೂ ಉರುಗ್ವೆ) ಸ್ವಾಗತಿಸಲಿದ್ದೇವೆ. ಇಡಿ ಜಗತ್ತನ್ನು ಒಗ್ಗೂಡಿಸಿ, ಜೊತೆಯಾಗಿ ಸಂಭ್ರಮಿಸುವ ಜಾಗತಿಕ ಹೆಜ್ಜೆಗುರುತು ಮೂಡಲಿಸಲಿದ್ದೇವೆ' ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

2030ರ ವಿಶ್ವಕಪ್‌ ಸಂಬಂಧಿಸಿದ ಫಿಫಾ ಒಪ್ಪಂದವು, 2024ರಲ್ಲಿ ನಡೆಯುವ ಫೆಡರೇಷನ್‌ನ 211 ಸದಸ್ಯ ರಾಷ್ಟ್ರಗಳ ಸಭೆಯಲ್ಲಿ ಅಧಿಕೃತವಾಗಿ ಅನುಮೋದನೆ ಪಡೆಯುವುದು ಬಾಕಿ ಇದೆ.

ಜೂನ್‌ ಹಾಗೂ ಜುಲೈನಲ್ಲಿ ನಡೆಯುವ ಟೂರ್ನಿಯಲ್ಲಿ 104 ಪಂದ್ಯಗಳು ನಡೆಯಲಿವೆ.

2034ರ ವಿಶ್ವಕಪ್‌ ಟೂರ್ನಿಯ ಆತಿಥ್ಯಕ್ಕಾಗಿ ಬಿಡ್‌ ಸಲ್ಲಿಸಲು ಸೌದಿ ಅರೇಬಿಯಾ ಉತ್ಸುಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.