ADVERTISEMENT

ಮೆಸ್ಸಿ ಮಿಂಚಲಿದ್ದಾರೆ, ಅರ್ಜೆಂಟೀನಾ ಗೆಲ್ಲಲಿದೆ ಎಂದು 2015ರಲ್ಲೇ ಹೇಳಿದ್ದ ಈತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಡಿಸೆಂಬರ್ 2022, 7:54 IST
Last Updated 19 ಡಿಸೆಂಬರ್ 2022, 7:54 IST
Jose Miguel Polanco
Jose Miguel Polanco   

ಬೆಂಗಳೂರು: ಭಾನುವಾರ ಕತಾರ್‌ನ ದೋಹಾದಲ್ಲಿ ನಡೆದ ಫಿಫಾ ಫುಟ್‌ಬಾಲ್ ವರ್ಲ್ಡ್ ಕಪ್2022 ಪಂದ್ಯಾವಳಿಯಲ್ಲಿ ಅರ್ಜೆಂಟೀನಾ ಚಾಂಪಿಯನ್ ಆಗಿ ಮೆರೆದಿದೆ. ಅದರಲ್ಲೂ ಆ ತಂಡದ ಲಯೊನೆಲ್‌ ಮೆಸ್ಸಿ ಅವರು ಮಿಂಚಿದ್ದು ವ್ಯಾಪಕ ಸದ್ದು ಮಾಡುತ್ತಿದೆ.

ಇದು ಹೀಗೆ ಆಗುತ್ತದೆ ಎಂದು 2015ರಲ್ಲೇ ಯುವಕನೊಬ್ಬ ಕರಾರುವಕ್ಕಾಗಿ ಹೇಳಿದ್ದ ಎಂಬುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.Jose Miguel Polanco ಎನ್ನುವ ಅಮೆರಿಕದ ಡಲ್ಲಾಸ್‌ನ ಯುವಕ 2015ರಲ್ಲಿ ಟ್ವೀಟ್ ಮಾಡಿ, 'ಡಿಸೆಂಬರ್ 18, 2022 ರಂದು ನಡೆಯುವ ಫುಟ್‌ಬಾಲ್ ವಿಶ್ವಕಪ್ ಮ್ಯಾಚ್‌ನಲ್ಲಿ ಅರ್ಜೆಂಟೀನಾ ಚಾಂಪಿಯನ್ ಆಗುತ್ತದೆ. 34 ವರ್ಷದ ಲಯೊನೆಲ್‌ ಮೆಸ್ಸಿ ಆ ವರ್ಲ್ಡ್ ಕಪ್‌ನಲ್ಲಿ ಭಾರಿ ಮಿಂಚುತ್ತಾರೆ. ಆಗದಿದ್ದರೇ 7 ವರ್ಷಗಳ ಬಳಿಕ ನನ್ನ ಕೇಳಿ' ಎಂದು ಇಂಗ್ಲಿಷ್‌ನಲ್ಲಿ ಟ್ವೀಟ್ ಮಾಡಿ ಹೇಳಿದ್ದ.

ನಿನ್ನೆಯ ಫುಟ್‌ಬಾಲ್ ಫಲಿತಾಂಶದ ನಂತರJoseನ ಆ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, 3 ಲಕ್ಷ ಜನ ಲೈಕ್, 10 ಸಾವಿರ ಜನ ಕಮೆಂಟ್‌, 2 ಲಕ್ಷ ಜನ ರಿಟ್ವೀಟ್ ಮಾಡಿದ್ದಾರೆ. ಇದು ವ್ಯಾಪಕ ಚರ್ಚೆಯಾಗುತ್ತಿದೆ.

ಇನ್ನುJose ಒಬ್ಬ ಟ್ರಾವೆಲ್ ವ್ಲಾಗರ್ ಆಗಿದ್ದು ಅನೇಕ ದೇಶಗಳಿಗೆ ಭೇಟಿ ನೀಡಿದ್ದಾರೆ.ಅರ್ಜಿಂಟಿನಾ ತಂಡದ ಅಭಿಮಾನಿಯಾಗಿರುವ ಇವರು ನಿನ್ನೆಯ ಫೈನಲ್ ಪಂದ್ಯದಲ್ಲಿ ಹಾಜರಿದ್ದು ಪಂದ್ಯವನ್ನು ಕಣ್ತುಂಬಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.