ನವದೆಹಲಿ: ಪ್ರತಿ ರಾಜ್ಯ ಸಂಸ್ಥೆಗಳಿಗೆ ವಾರ್ಷಿಕ ತಲಾ ₹ 24 ಲಕ್ಷ ಅನುದಾನ ನೀಡಲು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ (ಎಐಎಫ್‌ಎಫ್) ಅಭಿವೃದ್ಧಿ ಸಮಿತಿ ಶಿಫಾರಸು ಮಾಡಿದೆ.
ಈ ಕುರಿತು ಸಮಿತಿಯ ಸಭೆಯು ಅಭಿಜಿತ್ ಪಾಲ್ ಅಧ್ಯಕ್ಷತೆಯಲ್ಲಿ ಇಲ್ಲಿಯ ಫುಟ್‌ಬಾಲ್ ಹೌಸ್‌ನಲ್ಲಿ
ನಡೆಯಿತು.
‘ಆರ್ಥಿಕ ನೆರವನ್ನು ರಾಜ್ಯ ಸಂಸ್ಥೆಗಳು ಮಹಿಳಾ, ಪುರುಷರ ಲೀಗ್, ಯೂತ್ ಲೀಗ್, ಸಲಕರಣೆಗಳ ಖರೀದಿ, ತಳಮಟ್ಟದ ಬೆಳವಣಿಗೆಗೆ ಬಳಸಿಕೊಳ್ಳಬಹುದು‘ ಎಂದು ಎಐಎಫ್‌ಎಫ್ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.