ADVERTISEMENT

ಫುಟ್‌ಬಾಲ್‌ ಪಂದ್ಯ ಡ್ರಾ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 19:50 IST
Last Updated 4 ನವೆಂಬರ್ 2019, 19:50 IST

ಬೆಂಗಳೂರು: ಎಜಿಒಆರ್‌ಸಿ ಹಾಗೂ ಇನ್‌ಕಮ್‌ ಟ್ಯಾಕ್ಸ್‌ ತಂಡಗಳ ನಡುವಿನ ಫುಟ್‌ಬಾಲ್‌ ಪಂದ್ಯ ಗೋಲುರಹಿತ ಡ್ರಾನಲ್ಲಿ ಅಂತ್ಯಕಂಡಿತು. ಸೋಮವಾರ ಬೆಂಗಳೂರು ಫುಟ್‌ಬಾಲ್‌ ಸ್ಟೇಡಿಯಂನಲ್ಲಿ ನಡೆದ ಬಿಡಿಎಫ್‌ಎ ಸೂಪರ್‌ ಡಿವಿಜನ್‌ ಲೀಗ್ ಪಂದ್ಯದಲ್ಲಿ ಎರಡೂ ತಂಡಗಳಿಗೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ.

ಜಿದ್ದಾಜಿದ್ದಿ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ಗೋಲು ಗಳಿಸುವ ಕೆಲವು ಅವಕಾಶ ಸಿಕ್ಕರೂ ಯಶಸ್ಸು ಲಭಿಸಲಿಲ್ಲ. ಮಂಗಳವಾರ ಸೌತ್‌ ಯುನೈಟೆಡ್‌ ಎಫ್‌ಸಿ–ಓಜೋನ್‌ ಎಫ್‌ಸಿ ನಡುವೆ ಹಣಾಹಣಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT