
ಪರಿಕ್ರಮ ಎಫ್‌ಸಿ ತಂಡದ ಟೆನ್ಜಿನ್ ವೋಸರ್ (ಎಡ) ಮತ್ತು ಎಂಎಫ್‌ಎಆರ್ ತಂಡದ ಅನಸ್ ಯೂಸುಫ್ ಚೆಂಡಿಗಾಗಿ ಸೆಣಸಾಟ ನಡೆಸಿದರು
–ಪ್ರಜಾವಾಣಿ ಚಿತ್ರ: ಬಿ.ಕೆ. ಜನಾರ್ದನ್
ಬೆಂಗಳೂರು: ಥಾಂಗ್‌ಜಲೆನ್ ಹಾವೋಕಿಪ್ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಪರಿಕ್ರಮ ಎಫ್‌ಸಿ ತಂಡವು ಸೂಪರ್ ಡಿವಿಷನ್ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 3–2ರಿಂದ ಎಂಎಫ್‌ಎಆರ್ ಸ್ಟೂಡೆಂಟ್ಸ್ ಯೂನಿಯನ್ ಎಫ್‌ಸಿ ತಂಡವನ್ನು ಮಣಿಸಿತು.
ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಎಂಎಫ್‌ಎಆರ್ ತಂಡದ ಪರ ಲ್ಯಾಮ್‌ಖೋಲೆನ್ ಡೌಂಗೆಲ್ ಮತ್ತು ಮುಹಮ್ಮದ್ ಜಸೀಮ್ ಎ.ಪಿ. ತಲಾ ಒಂದು ಗೋಲು ಗಳಿಸಿದರು.
ಇತರ ಪಂದ್ಯಗಳಲ್ಲಿ ಬಿಎಫ್‌ಸಿ ತಂಡವು 2–2ರಿಂದ ಎಂಇಜಿ ಅಂಡ್ ಸೆಂಟರ್ ಎಫ್‌ಸಿ ತಂಡದೊಂದಿಗೆ ಡ್ರಾ ಮಾಡಿಕೊಂಡಿತು. ಬೆಂಗಳೂರು ಡ್ರೀಮ್ ಯುನೈಟೆಡ್ ಎಫ್‌ಸಿ 3–1ರಿಂದ ಭಾರತ್ ಬೆಂಗಳೂರು ವಿರುದ್ಧ ಗೆಲುವು ಸಾಧಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.