ಬೆಂಗಳೂರು: ರಾಜ್ಯ ಫುಟ್‌ಬಾಲ್ ತಂಡದ ಮಾಜಿ ಆಟಗಾರ ಇ.ರಾಮಕೃಷ್ಣ (91) ನಗರದ ಗವಿಪುರಂನಲ್ಲಿರುವ ನಿವಾಸದಲ್ಲಿ ಶನಿವಾರ ನಿಧನರಾದರು. ಸೀನಿಯರ್ ರಾಮಿ ಎಂದೇ ಹೆಸರಾಗಿದ್ದ ಅವರು ಹಿಂದಿನ ಮೈಸೂರು ರಾಜ್ಯ ತಂಡ, ಬ್ಲೂಸ್ ಕ್ಲಬ್ ಮತ್ತು ಐಟಿಐ ಎಫ್‌ಸಿ ಪರ ಆಡಿದ್ದಾರೆ.
1952ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದ ಅವರು 1953ರಿಂದ 1956ರ ವರೆಗೆ ಕೋಲ್ಕತ್ತ, ಚೆನ್ನೈ, ಕೇರಳದ ಎರ್ನಾಕುಳಂ ಮತ್ತು ತಿರುವನಂತಪುರಂನಲ್ಲಿ ನಡೆದಿದ್ದ ಟೂರ್ನಿಗಳಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. 1956ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ರಷ್ಯಾ ಎದುರಿನ ಹಣಾಹಣಿಯಲ್ಲಿ ಭಾರತದ ಪರ ಆಡಿದ್ದರು. ಪಟಿಯಾಲದ ಭಾರತ ಕ್ರೀಡಾ ಸಂಸ್ಥೆಯಲ್ಲಿ ಕೋಚಿಂಗ್ ತರಬೇತಿಯನ್ನೂ ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.