
ಬೆಂಗಳೂರು: ಪರಿಕ್ರಮ ಹ್ಯುಮಾನಿಟಿ ಫೌಂಡೇಷನ್‌ನ ಆಶ್ರಯದಲ್ಲಿ 13ನೇ ಆವೃತ್ತಿಯ ಪರಿಕ್ರಮ ಚಾಂಪಿಯನ್ ಲೀಗ್ (ಪಿಸಿಎಲ್) ಫುಟ್‌ಬಾಲ್ ಟೂರ್ನಿ ಇದೇ 27ರಿಂದ 29ರವರೆಗೆ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.
16 ವರ್ಷದೊಳಗಿನ ಅಂತರ ಶಾಲಾ ಲೀಗ್ ಇದಾಗಿದ್ದು, ಒಟ್ಟು 16 ತಂಡಗಳು ಸ್ಪರ್ಧೆಯಲ್ಲಿವೆ. ನಗರದ 13 ಶಾಲೆಗಳು ಒಳಗೊಂಡಂತೆ ಗೋವಾ, ಉದಯಪುರ ಹಾಗೂ ಒಡಿಶಾದ ತಂಡಗಳು ‘ಸಮಾನತೆಯ ಕಪ್’ಗಾಗಿ ಹೋರಾಟ ನಡೆಸಲಿವೆ. ಡಿವೈಇಎಸ್ ಆಯುಕ್ತ ಆರ್.ಚೇತನ್ 27ರಂದು ಬೆಳಿಗ್ಗೆ ಟೂರ್ನಿಗೆ ಚಾಲನೆ ನೀಡುವರು.
‘ಅವಕಾಶವಂಚಿತ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ 2011ರಿಂದ ಪಿಸಿಎಲ್ ಆಯೋಜಿಸಲಾಗುತ್ತಿದೆ. ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ ಮತ್ತು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಕೂಡಾ ಪಿಸಿಎಲ್ ಅನ್ನು ದೇಶದ ಅತ್ಯುತ್ತಮ ಟೂರ್ನಿ ಎಂದು ಗುರುತಿಸಿದೆ’ ಎಂದು ಫೌಂಡೇಷನ್‌ನ ಸಂಸ್ಥಾಪಕಿ ಶುಕ್ಲಾ ಬೋಸ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.