ಬೆಂಗಳೂರು: ರಾಷ್ಟ್ರ ಮಟ್ಟದ ವಿವಿಧ ಟೂರ್ನಿಗಳಲ್ಲಿ ರಾಜ್ಯವನ್ನು ಪ್ರತಿನಿಧಿ ಸಿದ್ದ ಫುಟ್ಬಾಲ್ ಹಿರಿಯ ಆಟಗಾರ, ಕೋಚ್ ಸ್ಟೀಫನ್ (38) ಅವರು ಸೋಮವಾರ ಮೃತಪಟ್ಟರು.
ಸ್ಟೀಫನ್ ಅವರು ಜಾಂಡೀಸ್ ರೋಗದಿಂದ ಬಳಲುತ್ತಿದ್ದರು.
ವಿದ್ಯಾರಣ್ಯಪುರ ಸಮೀಪದ ಕ್ರೈಸ್ತ ಚಿತಾಗಾರದಲ್ಲಿ ಮಂಗಳವಾರ ಮಧ್ಯಾಹ್ನ 2ಕ್ಕೆ ಅಂತಿಮ ಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.