ADVERTISEMENT

ಫುಟ್‌ಬಾಲ್‌ ಆಟಗಾರ ಮಣಿತೊಂಬಿ ನಿಧನ

ಪಿಟಿಐ
Published 9 ಆಗಸ್ಟ್ 2020, 13:35 IST
Last Updated 9 ಆಗಸ್ಟ್ 2020, 13:35 IST

ಕೋಲ್ಕತ್ತ: ಭಾರತ ಫುಟ್‌ಬಾಲ್‌ ತಂಡದಲ್ಲಿ ಡಿಫೆನ್ಸ್‌ ಆಟಗಾರರಾಗಿದ್ದ ಹಾಗೂ ಮೋಹನ್‌ ಬಾಗನ್‌ ಕ್ಲಬ್‌ನ ನಾಯಕತ್ವ ವಹಿಸಿದ್ದ ಮಣಿತೊಂಬಿ ಸಿಂಗ್‌ (39) ಅವರು ಭಾನುವಾರ ನಿಧನರಾದರು. ತಮ್ಮ ತವರು ಮಣಿಪುರದ ಇಂಫಾಲ್‌ ಸಮೀಪದ ಹಳ್ಳಿಯೊಂದರಲ್ಲಿ ಅವರು ಕೊನೆಯುಸಿರೆಳೆದರು ಎಂದು ಬಾಗನ್‌ ಕ್ಲಬ್‌ ತಿಳಿಸಿದೆ.

ಮಣಿತೊಂಬಿ ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಪತ್ನಿ ಹಾಗೂ ಎಂಟು ವರ್ಷದ ಪುತ್ರನಿದ್ದಾನೆ.

ಮಣಿತೊಂಬಿ ಅವರ ನಿಧನಕ್ಕೆ ಸಂತಾಪ ಸೂಚಿಸಿ ಬಾಗನ್‌ ಕ್ಲಬ್‌ ಟ್ವೀಟ್‌ ಮಾಡಿದೆ.

ADVERTISEMENT

ಭಾರತ 23 ವರ್ಷದೊಳಗಿನವರ ತಂಡ 2003ರಲ್ಲಿ ಎಲ್‌ಜಿ ಕಪ್‌ ಗೆದ್ದುಕೊಂಡಾಗ ಮಣಿತೊಂಬಿ ತಂಡದಲ್ಲಿದ್ದರು. ಸ್ಟೀಫನ್‌ ಕಾನ್‌ಸ್ಟಂಟೈನ್‌ ನೇತೃತ್ವದ ತಂಡ, ಹೊ ಚಿ ಮಿನ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ3–2ರಿಂದ ಆತಿಥೇಯ ವಿಯೆಟ್ನಾಂ ತಂಡವನ್ನು ಮಣಿಸಿತ್ತು. 1971ರಲ್ಲಿ ಸಿಂಗಾಪುರದಲ್ಲಿ ನಡೆದ ಟೂರ್ನಿಯೊಂದನ್ನು ಗೆದ್ದ ಬಳಿಕ ಭಾರತ ತಂಡ ಜಯಿಸಿದ ಮೊದಲ ಅಂತರರಾಷ್ಟ್ರೀಯ ಟೂರ್ನಿ ಇದಾಗಿತ್ತು.

2002ರಲ್ಲಿ ಬುಸಾನ್‌ನಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಅವರು ಭಾರತ‌‌ ತಂಡವನ್ನು ಪ್ರತಿನಿಧಿಸಿದ್ದರು.

ಮೋಹನ್‌ ಬಾಗನ್‌ ಅಲ್ಲದೆ, ಸರ್ವೀಸಸ್‌, ಏರ್‌ ಇಂಡಿಯಾ, ಸಲಗಾಂವಕರ್‌ ತಂಡಗಳಲ್ಲಿಮಣಿತೊಂಬಿ ಆಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.