ADVERTISEMENT

ಫ್ರಾನ್ಸ್ ಫುಟ್‌ಬಾಲ್‌ ಆಟಗಾರ ಕಿಲಿಯನ್‌ ಬಾಪೆಗೆ ಕೋವಿಡ್‌–19

ಏಜೆನ್ಸೀಸ್
Published 8 ಸೆಪ್ಟೆಂಬರ್ 2020, 13:19 IST
Last Updated 8 ಸೆಪ್ಟೆಂಬರ್ 2020, 13:19 IST
ಕಿಲಿಯನ್‌ ಬಾಪೆ–ರಾಯಿಟರ್ಸ್‌ ಚಿತ್ರ
ಕಿಲಿಯನ್‌ ಬಾಪೆ–ರಾಯಿಟರ್ಸ್‌ ಚಿತ್ರ   

ಪ್ಯಾರಿಸ್‌: ಫ್ರಾನ್ಸ್‌ ರಾಷ್ಟ್ರೀಯ ತಂಡ ಹಾಗೂ ಪ್ಯಾರಿಸ್‌ ಸೇಂಟ್‌ ಜರ್ಮನ್‌ ಫುಟ್‌ಬಾಲ್ ಕ್ಲಬ್‌ ಆಟಗಾರ ಕಿಲಿಯನ್‌ ಬಾಪೆ ಅವರಲ್ಲಿ ಕೋವಿಡ್–19 ಸೋಂಕು ಇರುವುದು ದೃಢಪಟ್ಟಿದೆ. ಇದರಿಂದ ನೇಷನ್ಸ್‌‌ ಲೀಗ್‌ನ ಕ್ರೊವೇಷ್ಯಾ ವಿರುದ್ಧದ ಪಂದ್ಯದಲ್ಲಿ ಅವರು ಕಣಕ್ಕಿಳಿಯುವುದಿಲ್ಲ ಎಂದು ಫ್ರೆಂಚ್‌ ಫೆಡರೇಷನ್‌ ತಿಳಿಸಿದೆ.

ಯೂರೋಪಿಯನ್‌ ಫುಟ್‌ಬಾಲ್‌ ಸಂಸ್ಥೆಗಳ ಒಕ್ಕೂಟ (ಯುಇಎಫ್‌ಎ) ನಡೆಸಿದಪರೀಕ್ಷೆಯಲ್ಲಿ ಬಾಪೆ ಅವರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ಬಳಿಕ ಅವರು ಫ್ರಾನ್ಸ್‌ ತಂಡದ ತರಬೇತಿ ಶಿಬಿರವನ್ನು ತೊರೆದರು. ಸೋಮವಾರ ಸಂಜೆಪ್ರತ್ಯೇಕವಾಸಕ್ಕಾಗಿ ಮನೆಗೆ ಮರಳಿದರು.

ನೇಷನ್ಸ್‌ ಲೀಗ್‌ನಲ್ಲಿ ಶನಿವಾರ ಸ್ವೀಡನ್‌ ಎದುರು ನಡೆದ ಪಂದ್ಯದಲ್ಲಿ ಬಾಪೆ ಬಾರಿಸಿದ ಏಕೈಕ ಗೋಲಿನಿಂದ ಫ್ರಾನ್ಸ್ ತಂಡ 1–0ಯಿಂದ ಸ್ವೀಡನ್‌ಅನ್ನು ಮಣಿಸಿತ್ತು. ಇದು ಅವರ 14ನೇ ಅಂತರರಾಷ್ಟ್ರೀಯ ಗೋಲು ಆಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.