ADVERTISEMENT

ಪೆಲೆಗೇ ಸೆಡ್ಡು ಹೊಡೆದಿದ್ದ ಬ್ಯಾಂಕ್ಸ್‌!

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2019, 9:40 IST
Last Updated 17 ಫೆಬ್ರುವರಿ 2019, 9:40 IST
ಇಂಗ್ಲೆಂಡ್‌ನ ಸ್ಟೋಕ್ಸ್‌ ಸಿಟಿಯಲ್ಲಿ ನಿರ್ಮಿಸಲಾಗಿರುವ ಗಾರ್ಡನ್ ಬ್ಯಾಂಕ್ಸ್‌ ಅವರ ಪ್ರತಿಮೆಗೆ ಅಭಿಮಾನಿಗಳು ಗೌರವ ಅರ್ಪಿಸಿದರು  –ಎಎಫ್‌ಪಿ ಚಿತ್ರ
ಇಂಗ್ಲೆಂಡ್‌ನ ಸ್ಟೋಕ್ಸ್‌ ಸಿಟಿಯಲ್ಲಿ ನಿರ್ಮಿಸಲಾಗಿರುವ ಗಾರ್ಡನ್ ಬ್ಯಾಂಕ್ಸ್‌ ಅವರ ಪ್ರತಿಮೆಗೆ ಅಭಿಮಾನಿಗಳು ಗೌರವ ಅರ್ಪಿಸಿದರು  –ಎಎಫ್‌ಪಿ ಚಿತ್ರ   

ಗಾರ್ಡನ್ ಬ್ಯಾಂಕ್ಸ್‌ ಎಂಬ ಹೆಸರು ಫುಟ್‌ಬಾಲ್ ಪ್ರೇಮಿಗಳಿಗೆ ಚಿರಪರಿಚಿತ. ‘ಥ್ಯಾಂಕ್‌ಲೆಸ್‌ ಜಾಬ್’ ಎಂದೇ ಹೇಳಲಾಗುವ ಗೋಲ್‌ಕೀಪಿಂಗ್‌ಗೆ ತಾರಾಮೌಲ್ಯ ತಂದಿತ್ತ ಖ್ಯಾತಿ ಬ್ಯಾಂಕ್ಸ್‌ ಅವರದ್ದು. ಇಂಗ್ಲೆಂಡ್‌ ತಂಡದಲ್ಲಿ 1963 ರಿಂದ 1972ರವರೆಗೆ ಗೋಲ್‌ಕೀಪರ್‌ ಆಗಿ ಮಿಂಚಿದವರು. 1966ರಲ್ಲಿ ತಂಡವು ಫಿಫಾ ವಿಶ್ವಕಪ್ ಗೆದ್ದಿತು.

1970ರ ವಿಶ್ವಕಪ್‌ ಟೂರ್ನಿಯಲ್ಲಿ ಬ್ರೆಜಿಲ್ ವಿರುದ್ಧದ ಪಂದ್ಯದಲ್ಲಿ ಅವರು ಪೆಲೆ ಕಿಕ್ ಮಾಡಿದ್ದ ಚೆಂಡನ್ನು ತಡೆದಿದ್ದ ರೀತಿ ವಿಶ್ವವಿಖ್ಯಾತಿ ಗಳಿಸಿದೆ. ಅದನ್ನು ಇಂದಿಗೂ ‘ಅನ್‌ಬಿಲಿವೇಬಲ್ ಸೇವ್’ ಎಂದೇ ಹೇಳಲಾಗುತ್ತದೆ. ಆ ಕಾಲಘಟ್ಟದಲ್ಲಿ ಪೆಲೆ ಹೊಡೆಯುವ ಗೋಲು ತಡೆಯುವುದು ಸುಲಭವಾಗಿರಲಿಲ್ಲ. ಆದ್ದರಿಂದಲೇ ಬ್ಯಾಂಕ್ಸ್‌ ಬಹಳಷ್ಟು ಪ್ರಖ್ಯಾತರಾದರು. ತಂಡಕ್ಕಾಗಿ 73 ಪಂದ್ಯಗಳನ್ನು ಆಡಿದ್ದರು. 1972ರಲ್ಲಿ ಕಾರು ಅಪಘಾತದಲ್ಲಿ ಒಂದು ಕಣ್ಣು ಕಳೆದುಕೊಂಡಿದ್ದರು. ನಂತರ ನಿವೃತ್ತರಾದರು. ಹೋದ ವಾರ ತಮ್ಮ 81ನೇ ವಯಸ್ಸಿನಲ್ಲಿ ಅವರು ನಿಧನರಾದರು. ಇವತ್ತಿಗೂ ಅವರು ಹೊಸ ತಲೆಮಾರಿನ ಗೋಲ್‌ಕೀಪರ್‌ಗಳಿಗೆ ಮಾದರಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT