ADVERTISEMENT

ವಿಶ್ವಕಪ್: ಅರ್ಹತೆ ಗಳಿಸಿದ ಜರ್ಮನಿ

ಏಜೆನ್ಸೀಸ್
Published 12 ಅಕ್ಟೋಬರ್ 2021, 20:03 IST
Last Updated 12 ಅಕ್ಟೋಬರ್ 2021, 20:03 IST
ಜರ್ಮನಿಯ ಟಿಮೊ ವೆರ್ನರ್‌ (ಎಡ) ಮತ್ತು ನಾರ್ತ್‌ ಮೆಸಿಡೋನಿಯಾದ ಡಾರ್ಕೊ ವೆಲ್ಕೊವಸ್ಕಿ ನಡುವೆ ಚೆಂಡಿಗಾಗಿ ಪೈಪೋಟಿ– ಎಎಫ್‌ಪಿ ಚಿತ್ರ
ಜರ್ಮನಿಯ ಟಿಮೊ ವೆರ್ನರ್‌ (ಎಡ) ಮತ್ತು ನಾರ್ತ್‌ ಮೆಸಿಡೋನಿಯಾದ ಡಾರ್ಕೊ ವೆಲ್ಕೊವಸ್ಕಿ ನಡುವೆ ಚೆಂಡಿಗಾಗಿ ಪೈಪೋಟಿ– ಎಎಫ್‌ಪಿ ಚಿತ್ರ   

ಪ್ಯಾರಿಸ್‌: ಟಿಮೊ ವೆರ್ನರ್‌ ಗಳಿಸಿದ ಗಳಿಸಿದ ಎರಡು ಗೋಲುಗಳ ನೆರವಿನಿಂದ ಜರ್ಮನಿ ತಂಡವು ವಿಶ್ವಕಪ್ ಅರ್ಹತಾ ಫುಟ್‌ಬಾಲ್ ಟೂರ್ನಿಯಲ್ಲಿ ನಾರ್ತ್‌ ಮೆಸಿಡೋನಿಯಾ ತಂಡವನ್ನು ಮಣಿಸಿತು. ಇದರೊಂದಿಗೆ 2022ರ ವಿಶ್ವಕಪ್‌ಗೆ ಅರ್ಹತೆ ಗಳಿಸಿದ ಮೊದಲ ತಂಡ ಎನಿಸಿಕೊಂಡಿತು.

ಸೋಮವಾರ ರಾತ್ರಿ ನಡೆದ ಹಣಾಹಣಿಯಲ್ಲಿ ಜರ್ಮನಿ ತಂಡಕ್ಕೆ 4–0ಯಿಂದ ಗೆಲುವು ಒಲಿಯಿತು. ಈ ಮೂಲಕ ‘ಜೆ’ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿತು.

ವಿಜೇತ ತಂಡದ ಪರ ವೆರ್ನರ್‌ 70 ಮತ್ತು 73ನೇ ನಿಮಿಷಗಳಲ್ಲಿ ಕಾಲ್ಚಳಕ ತೋರಿದರು. ಹ್ಯಾವೆಜ್‌ (50ನೇ ನಿಮಿಷ) ಮತ್ತು ಮುಸಿಯಾಲ (83ನೇ ನಿಮಿಷ) ತಲಾ ಒಂದು ಗೋಲು ಹೊಡೆದರು.

ADVERTISEMENT

ಇನ್ನುಳಿದ ಪಂದ್ಯಗಳಲ್ಲಿ ವೇಲ್ಸ್ 1–0ರಿಂದ ಈಸ್ಟೋನಿಯಾ ಎದುರು, ಜೆಕ್‌ ಗಣರಾಜ್ಯ 2–0ಯಿಂದ ಬೆಲಾರೂಸ್ ಎದುರು ಜಯ ಗಳಿಸಿದವು.

‘ಎಚ್‌’ ಗುಂಪಿನ ಪಂದ್ಯಗಳಲ್ಲಿ ಕ್ರೊವೇಷ್ಯಾ 2–2ರಿಂದ ಸ್ಲೊವೇಕಿಯಾ ಎದುರು ಡ್ರಾ ಸಾಧಿಸಿದರೆ, ರಷ್ಯಾ ಸ್ಲೊವೇನಿಯಾ ವಿರುದ್ಧ 2–1ರಿಂದ ಗೆಲುವು ಸಾಧಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.