ADVERTISEMENT

ಬಿಡಿಎಫ್‌ಎ ಬಿ ಡಿವಿಷನ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌: ಎಚ್‌ಎಎಲ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 20:13 IST
Last Updated 30 ಸೆಪ್ಟೆಂಬರ್ 2019, 20:13 IST
ಟ್ರೋಫಿಯೊಂದಿಗೆ ಸಂಭ್ರಮಿಸಿದ ಎಚ್‌ಎಎಲ್‌ ತಂಡದ ಆಟಗಾರರು
ಟ್ರೋಫಿಯೊಂದಿಗೆ ಸಂಭ್ರಮಿಸಿದ ಎಚ್‌ಎಎಲ್‌ ತಂಡದ ಆಟಗಾರರು   

ಬೆಂಗಳೂರು: ಉತ್ತಮ ಆಟವಾಡಿದ ಎಚ್‌ಎಎಲ್‌ ಎಫ್‌ಸಿ ತಂಡವು ಬಿಡಿಎಫ್‌ಎ ಬಿ ಡಿವಿಷನ್‌ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಡಾ. ಎಪಿಜೆ ಅಬ್ದುಲ್‌ ಕಲಾಂ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಫೈನಲ್‌ ಪಂದ್ಯದಲ್ಲಿ ಎಚ್‌ಎಎಲ್‌ ತಂಡವು ರೆಬೆಲ್ಸ್ ಎಫ್‌ಸಿಯನ್ನು 3–0ಯಿಂದ ಸೋಲಿಸಿತು.

ವಿಜೇತ ತಂಡದ ಪರ ಜೆಹರುಲ್‌ ಇಬ್ಲೆಮ್‌ (21ನೇ ನಿಮಿಷ), ರೂಪೇಶ್‌ ಕುಮಾರ್‌ (28ನೇ ನಿಮಿಷ) ಹಾಗೂ ರಾಹಿ ತೇಜಾ (68ನೇ ನಿಮಿಷ) ತಲಾ ಒಂದು ಗೋಲು ದಾಖಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT