ಮಂಗಳೂರು: ರೋಚಕ ಅಂತ್ಯ ಕಂಡ ಪಂದ್ಯಗಳಲ್ಲಿ ಉಳ್ಳಾಲದ ಭಾರತಿ ಇಂಗ್ಲಿಷ್ ಮೀಡಿಯಂ ಶಾಲೆ, ಮೂಡುಬಿದಿರೆಯ ಅಲ್ ಫುರ್ಖಾನ್ ಶಾಲೆ ಮತ್ತು ಬಜಪೆಯ ಸೇಂಟ್ ಜೋಸೆಫ್ ಶಾಲೆ ತಂಡಗಳು ಸೋಮವಾರ ಜಯಭೇರಿ ಮೊಳಗಿಸಿದವು.
ದಕ್ಷಿಣ ಕನ್ನಡ ಜಿಲ್ಲಾ ಫುಟ್‌ಬಾಲ್ ಸಂಸ್ಥೆ ನಗರದ ನೆಹರೂ ಮೈದಾನದಲ್ಲಿ ಆಯೋಜಿಸಿರುವ 26ನೇ ವರ್ಷದ ಇಂಡಿಪೆಂಡೆನ್ಸ್ ಕಪ್ ಫುಟ್‌ಬಾಲ್ ಟೂರ್ನಿಯ ಹೈಸ್ಕೂಲ್ ಬಾಲಕರ ವಿಭಾಗದ ಪಂದ್ಯಗಳಲ್ಲಿ ಭಾರತಿ ಶಾಲೆ ಮತ್ತು ಅಲ್ ಫುರ್ಖಾನ್ ಶಾಲೆ ಪೆನಾಲ್ಟಿ ಶೂಟೌಟ್‌ನಲ್ಲಿ ಜಯ ಗಳಿಸಿದವು. ಸೇಂಟ್ ಜೋಸೆಫ್ ಶಾಲೆ ಪೆನಾಲ್ಟಿ ಕಿಕ್ ಮೂಲಕ ಗೆಲುವು ಸಾಧಿಸಿತು.
ಭಾರತಿ ಶಾಲೆ ತಂಡ ಅಡ್ಯಾರ್‌ನ ಬರಾಖಾ ಶಾಲೆ ವಿರುದ್ಧ 3–2ರಲ್ಲಿ, ಅಲ್ ಫರ್ಖಾನ್ ತಂಡ ಸೇಂಟ್ ಅಲೋಶಿಯಸ್ ಗೊಂಜಾಗ ವಿರುದ್ಧ 3–2ರಲ್ಲಿ ಮತ್ತು ಸೇಂಟ್ ಜೋಸೆಫ್ 3–2ರಲ್ಲಿ ಬ್ಯಾರೀಸ್ ಪಬ್ಲಿಕ್ ಸ್ಕೂಲ್ ವಿರುದ್ಧ ಗೆದ್ದಿತು.
ಇತರ ಪಂದ್ಯಗಳಲ್ಲಿ ನಾಟೆಕಲ್‌ನ ಕುನ್ನಿಲ್ ಅಕಾಡೆಮಿ 3–0ಯಿಂದ ಕಾರ್ಮೆಲ್ ಶಾಲೆಯನ್ನು, ಸೇಂಟ್ ಅಲೋಶಿಯಸ್ 1–0ಯಲ್ಲಿ ಕಾಸಿಯಾ ಶಾಲೆಯನ್ನು, ಕೊಲ್ಯದ ಜೋಯ್‌ಲ್ಯಾಂಡ್ 1–0ಯಲ್ಲಿ ಚೈತನ್ಯ ಶಾಲೆಯನ್ನು, ಬದ್ರಿಯಾ ಶಾಲೆ 2–0ಯಿಂದ ಜಮಾಯತ್ ಉಲ್ ಹುದಾ ಶಾಲೆಯನ್ನು ಮಣಿಸಿತು.
ಬ್ರೈಟ್ ಮಾದರಿ ಶಾಲೆ 1–0ಯಿಂದ ಕಾರ್ಮೆಲ್ ಶಾಲೆ ವಿರುದ್ಧ, ತಲಪಾಡಿಯ ಫಲಾ ಶಾಲೆ 1–0ಯಿಂದ ಹಜರತ್ ಸೈಯದ್ ಮದನಿ ಶಾಲೆ ವಿರುದ್ಧ, ಕಲ್ಲಾಪು ಪೀಸ್ ಪಬ್ಲಿಕ್ ಶಾಲೆ 1–0ಯಿಂದ ಜಪ್ಪಿನಮೊಗರು ಯೆನೆಪೋಯ ಶಾಲೆ ವಿರುದ್ಧ, ಬಬ್ಬುಕಟ್ಟೆಯ ಹಿರಾ ಹೈಸ್ಕೂಲ್ 2–0ಯಿಂದ ಪ್ರೆಸಿಡೆನ್ಸಿ ಶಾಲೆ ವಿರುದ್ಧ, ಮಿಲಾಗ್ರಿಸ್ ಸೆಂಟ್ರಲ್ ಶಾಲೆ 1–0ಯಿಂದ ಎಆರ್‌ಕೆ ಕಸಬಾ ವಿರುದ್ಧ, ಜಪ್ಪಿನಮೊಗರು ಪ್ರೆಸ್ಟಿಜ್ ಶಾಲೆ 2–0ಯಿಂದ ಸೋಮೇಶ್ವರದ ಪರಿಜ್ಞಾನ ಶಾಲೆ ವಿರುದ್ಧ ಗೆಲುವು ದಾಖಲಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.