ಫುಟ್‌ಬಾಲ್
ಹಿಸೋರ್ (ತಾಜಿಕಿಸ್ತಾನ): ಭಾರತ ತಂಡದವರು ಪಾಲಿಗೆ ಬಂದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಲು ವಿಫಲರಾದರು. ಹೀಗಾಗಿ ಗುರುವಾರ ನಡೆದ ಸಿಎಎಫ್‌ಎ ನೇಷನ್ಸ್ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಅಫ್ಗಾನಿಸ್ತಾನ ವಿರುದ್ಧ ಗೋಲಿಲ್ಲದೇ ಡ್ರಾ ಮಾಡಿಕೊಳ್ಳಬೇಕಾಯಿತು.
ಭಾರತ ‘ಬಿ’ ಗುಂಪಿನಲ್ಲಿ 3 ಪಂದ್ಯಗಳಿಂದ 4 ಪಾಯಿಂಟ್ಸ್ ಕಲೆಹಾಕಿತು. ಇದಕ್ಕೆ ಮೊದಲಿನ ಪಂದ್ಯಗಳಲ್ಲಿ ತಾಜಿಕಿಸ್ತಾನ ವಿರುದ್ಧ ಜಯಗಳಿಸಿದ ಭಾರತ, ಇರಾನ್‌ಗೆ ಸೋತಿತ್ತು.
ಇರಾನ್– ತಾಜಿಕಿಸ್ತಾನ ನಡುವಣ ಪಂದ್ಯದ ಫಲಿತಾಂಶದ ಮೇಲೆ ಭಾರತದ ಭವಿಷ್ಯ ನಿರ್ಧಾರವಾಗಲಿದೆ. ಪ್ರಬಲ ಇರಾನ್ ಗೆದ್ದಲ್ಲಿ ಭಾರತ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ಮುಂದಿನ ಹಂತಕ್ಕೆ ಮುನ್ನಡೆಯಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.