ADVERTISEMENT

ಫುಟ್‌ಬಾಲ್‌: ಭಾರತಕ್ಕೆ ಮಣಿದ ಬಹರೇನ್‌

ಪಿಟಿಐ
Published 4 ಸೆಪ್ಟೆಂಬರ್ 2025, 16:09 IST
Last Updated 4 ಸೆಪ್ಟೆಂಬರ್ 2025, 16:09 IST
<div class="paragraphs"><p>ಫುಟ್‌ಬಾಲ್‌</p></div>

ಫುಟ್‌ಬಾಲ್‌

   

ದೋಹಾ: ಭಾರತದ ತಂಡವು ಇಲ್ಲಿ ನಡೆದ ಎಎಫ್‌ಸಿ 23 ವರ್ಷದೊಳಗಿನವರ ಪುರುಷರ ಏಷ್ಯನ್‌ ಕಪ್‌ 2026 ಕ್ವಾಲಿಫೈಯರ್‌ ಪಂದ್ಯದಲ್ಲಿ 2–0 ಗೋಲುಗಳಿಂದ ಬಹರೇನ್‌ ತಂಡವನ್ನು ಮಣಿಸಿ ಶುಭಾರಂಭ ಮಾಡಿತು. 

ಬುಧವಾರ ನಡೆದ ಎಚ್‌ ಗುಂಪಿನ ಮೊದಲ ಪಂದ್ಯದಲ್ಲಿ ಭಾರತದ ಪರ ಮುಹಮ್ಮದ್ ಸುಹೈಲ್ (32ನೇ ನಿಮಿಷ) ಮತ್ತು ಚಿಂಗಂಗ್‌ಬಮ್ ಶಿವಲ್ಡೊ ಸಿಂಗ್ (90+5ನೇ) ಗೋಲು ದಾಖಲಿಸಿದರು. 

ADVERTISEMENT

ಈ ಗೆಲುವಿನೊಂದಿಗೆ ಭಾರತ ತಂಡವು 3 ಅಂಕ ಗಳಿಸಿ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿವೆ. ಕತಾರ್‌ 13–0 ಯಿಂದ ಬ್ರೂನಿ ತಂಡವನ್ನು ಮಣಿಸಿ ಅಗ್ರಸ್ಥಾನದಲ್ಲಿದೆ. ಭಾರತ ಇದೇ 6ರಂದು ಕತಾರ್‌ ವಿರುದ್ಧ, 9ರಂದು ಬ್ರೂನಿ ವಿರುದ್ಧ ಸೆಣಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.