ADVERTISEMENT

ಭಾರತ ಫುಟ್‌ಬಾಲ್‌ ತಂಡದ ಟರ್ಕಿ ಪ್ರವಾಸ

ಟರ್ಕಿಯಲ್ಲಿ 19 ವಯಸ್ಸಿನೊಳಗಿನವರ ಫುಟ್‌ಬಾಲ್‌ ಟೂರ್ನಿ

ಪಿಟಿಐ
Published 14 ಜುಲೈ 2019, 20:24 IST
Last Updated 14 ಜುಲೈ 2019, 20:24 IST
   

ನವದೆಹಲಿ: ಭಾರತದ 19 ವರ್ಷದೊಳಗಿನವರ ಫುಟ್‌ಬಾಲ್‌ ತಂಡ ಟರ್ಕಿ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ ಓಮನ್‌ ಹಾಗೂ ರಾಷ್ಟ್ರೀಯ 19 ವಯಸ್ಸಿನೊಳಗಿನ ಆಟಗಾರರ ತಂಡವನ್ನು ಎದುರಿಸಲಿದೆ.

ಈ ವರ್ಷದ ಕೊನೆಯಲ್ಲಿ ನಡೆಯುವ ಎಎಫ್‌ಸಿ19 ವಯಸ್ಸಿನೊಳಗಿನವರ ಚಾಂಪಿಯನ್‌ಷಿಪ್‌ ಅರ್ಹತಾ ಟೂರ್ನಿಗೆ ಪೂರ್ವಸಿದ್ಧತೆಗಾಗಿ ಈ ಟೂರ್ನಿ ನಡೆಯಲಿದೆ.

ಓಮನ್‌ ಹಾಗೂ ಜೋರ್ಡಾನ್‌ ಅಲ್ಲದೆ ಸ್ಥಳೀಯ ಕ್ಲಬ್‌ ಕೋಸ್‌ಲಿಸ್ಪರ್‌ ಎದುರು ಸೌಹಾರ್ದ ಪಂದ್ಯವನ್ನು ಭಾರತ ತಂಡ ಆಡಲಿದೆ. ಜುಲೈ 19ರಿಂದ 27ರವರೆಗೆ ಈ ಪಂದ್ಯಗಳು ನಡೆಯಲಿವೆ.

ADVERTISEMENT

‘ಸಾಧ್ಯವಾದಷ್ಟು ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡುವುದು ನಮ್ಮ ಉದ್ದೇಶವಾಗಿದೆ. ಉತ್ತಮ ಫಲಿತಾಂಶ ಪಡೆಯಲು ಪ್ರಯತ್ನಿಸುತ್ತೇವೆ. ಟರ್ಕಿ ಪ್ರವಾಸವು ಪಶ್ಚಿಮ ಏಷ್ಯನ್‌ ರಾಷ್ಟ್ರಗಳ ವಿರುದ್ಧ ನಮ್ಮ ಆಟದ ರೀತಿ ಪರೀಕ್ಷಿಸಿಕೊಳ್ಳಲು ಒಂದು ಉತ್ತಮ ವೇದಿಕೆಯಾಗಿದೆ’ ಎಂದು ಭಾರತ 19 ವರ್ಷದೊಳಗಿನವರ ತಂಡದ ಮುಖ್ಯ ಕೋಚ್‌ ಫ್ಲಾಯ್ಡ್‌ ಪಿಂಟೊ ಅವರು ಹೇಳಿದರು.

ಭಾರತ ತಂಡ ಇಂತಿದೆ

ಗೋಲ್‌ಕೀಪರ್ಸ್: ಪ್ರಭ್‌ಸುಖನ್‌ ಸಿಂಗ್‌ ಗಿಲ್‌, ನೀರಜ್‌ ಕುಮಾರ್‌, ಮತ್ತು ಲಾಲ್‌ಬಿಯಾಕುಲಾ ಜೊಂಗ್ಟೆ.

ಡಿಫೆಂಡರ್ಸ್: ಜೀತೆಂದರ್‌ ಸಿಂಗ್‌, ನರೇಂದರ್‌, ಗುರುಕೀರತ್‌ ಸಿಂಗ್‌, ಸುಮಿತ್‌ ರಾಠಿ, ಮಹಮ್ಮದ್‌ ರಫಿ, ಆಕಾಶ್‌ ಮಿಶ್ರಾ, ಬಿಕಾಸ್‌ ಯುಮ್ನಾಮ್‌, ಮನೀಷ್‌ ಚೌಧರಿ ಮತ್ತು ತೊಯಿಬಾ ಸಿಂಗ್‌.

ಮಿಡ್‌ಫೀಲ್ಡರ್ಸ್: ಅಮರ್‌ಜೀತ್‌ ಸಿಂಗ್‌, ಜೀಕ್ಸನ್‌ ಸಿಂಗ್‌, ನಿಂತೊಯಿಗನ್ಬಾ ಮೀತೆಯ್‌, ಗಿವ್ಸನ್‌ ಸಿಂಗ್‌, ರಿಕಿ ಶಬಾಂಗ್‌, ಸೈಲೊ ಲಾಲ್‌ಚಾನ್ಹಿಮಾ ಮತ್ತು ರಾಬಿನ್‌ ಯಾದವ್‌.

ಫಾವಡ್ಸ್: ಹರ್ಮನ್‌ಪ್ರೀತ್‌ ಸಿಂಗ್‌, ವಿಕ್ರಂ ಪ್ರತಾಪ್‌ಸಿಂಗ್‌, ರೋಹಿತ್‌ ದನು, ರಿಡ್ಜ್‌ ಡೆಮೆಲ್ಲೊ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.