ADVERTISEMENT

ನಾಳೆಯಿಂದ ಡಬ್ಲ್ಯುಎಎಫ್‌ಎಫ್‌ ಫುಟ್‌ಬಾಲ್‌

ಪಿಟಿಐ
Published 30 ಜುಲೈ 2018, 19:26 IST
Last Updated 30 ಜುಲೈ 2018, 19:26 IST

ನವದೆಹಲಿ: ಐದನೆ ವೆಸ್ಟ್‌ ಏಷ್ಯನ್‌ ಫುಟ್‌ಬಾಲ್‌ ಫೆಡರೇಷನ್‌ (ಡಬ್ಲ್ಯುಎಎಫ್‌ಎಫ್‌) 16 ವರ್ಷದೊಳಗಿನ ಬಾಲಕರ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ ಆಗಸ್ಟ್‌ 1 ರಿಂದ ನಡೆಯಲಿದೆ.

ಭಾರತ, ಎಎಫ್‌ಸಿ ಚಾಂಪಿಯನ್‌ ಇರಾಕ್‌, ಜಪಾನ್‌, ಜೋರ್ಡನ್‌ ಮತ್ತು ಯೆಮನ್‌ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಜೋರ್ಡನ್‌ನ ಕಿಂಗ್‌ ಅಬ್ದುಲ್ಲಾ–2 ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯಗಳು ಜರುಗಲಿವೆ.

ಭಾರತ ತಂಡ ಸೆಪ್ಟೆಂಬರ್‌ನಲ್ಲಿ ಮಲೇಷ್ಯಾದಲ್ಲಿ ಆಯೋಜನೆಯಾಗಿರುವ ಎಎಫ್‌ಸಿ 16 ವರ್ಷದೊಳಗಿನವರ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಳಿಸಿದೆ. ಈ ಚಾಂಪಿಯನ್‌ಷಿಪ್‌ಗೆ ‍ಪೂರ್ವಸಿದ್ಧತೆ ಕೈಗೊಳ್ಳಲು ಡಬ್ಲ್ಯುಎಎಫ್‌ಎಫ್‌ ಟೂರ್ನಿ ವೇದಿಕೆಯಾಗಿದೆ.

ADVERTISEMENT

‘ಇರಾಕ್‌, ಜಪಾನ್‌, ಜೋರ್ಡನ್‌ ಮತ್ತು ಯೆಮನ್‌ ತಂಡಗಳು ಎಎಫ್‌ಸಿ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಳಿಸಿವೆ. ಈ ತಂಡಗಳ ವಿರುದ್ಧ ಆಡುವುದರಿಂದ ನಮ್ಮ ಆಟಗಾರರ ಮನೋಬಲ ಹೆಚ್ಚಲಿದೆ. ಈ ಕಾರಣದಿಂದಲೇ ಎಐಎಫ್‌ಎಫ್‌ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್‌) ಸಹಯೋಗದಲ್ಲಿ ಜೋರ್ಡನ್‌ನಲ್ಲಿ ಡಬ್ಲ್ಯುಎಎಫ್‌ಎಫ್‌ ಟೂರ್ನಿ ನಡೆಸಲಾಗುತ್ತಿದೆ’ ಎಂದು ಭಾರತ ತಂಡದ ನಿರ್ದೇಶಕ ಅಭಿಷೇಕ್‌ ಯಾದವ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.