ನವದೆಹಲಿ: ಮುಂಬೈ ಸಿಟಿ ಎಫ್‌ಸಿ ತಂಡದ ಕೋಚ್ ಜೋರ್ಗೆ ಕೋಸ್ಟಾ ಅವರು ಸೌದಿ ಅರೇಬಿಯಾದ ರೆಫರಿ ಟರ್ಕಿ ಮೊಹಮ್ಮದ್ ಅಲ್ ಖುದಯರ್ ವಿರುದ್ಧ ಜನಾಂಗೀಯ ನಿಂದನೆ ಆರೋಪ ಹೊರಿಸಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್), ಶಿಸ್ತು ಸಮಿತಿಗೆ ಸೂಚಿಸಿದೆ.
ಭಾನುವಾರ ಬೆಂಗಳೂರಿನಲ್ಲಿ ನಡೆದಿದ್ದ ಬಿಎಫ್‌ಸಿ ಎದುರಿನ ಐಎಸ್‌ಎಲ್ ಪಂದ್ಯದ ವೇಳೆ ಟರ್ಕಿ ಅವರು ಮುಂಬೈ ತಂಡದ ಸರ್ಜಿ ಕೆವಿನ್ ಅವರನ್ನು ಕೋತಿ ಎಂದು ಮೂದಲಿಸಿದ್ದರು. ಈ ಸಂಬಂಧ ಜೋರ್ಗೆ ಅವರು ಎಐಎಫ್‌ಎಫ್‌ಗೆ ದೂರು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.