ADVERTISEMENT

ಫುಟ್‌ಬಾಲ್‌: ಡ್ರಾ ಪಂದ್ಯದಲ್ಲಿ ಭಾರತ

ಪಿಟಿಐ
Published 6 ಆಗಸ್ಟ್ 2025, 20:10 IST
Last Updated 6 ಆಗಸ್ಟ್ 2025, 20:10 IST
<div class="paragraphs"><p>ಫುಟ್‌ಬಾಲ್</p></div>

ಫುಟ್‌ಬಾಲ್

   

ಯಾಂಗೂನ್ (ಮ್ಯಾನ್ಮಾರ್): ಭಾರತದ ವನಿತೆಯರು ಬುಧವಾರ ಇಲ್ಲಿ ನಡೆದ ಎಎಫ್‌ಸಿ 20 ವರ್ಷದೊಳಗಿನವರ ಏಷ್ಯನ್ ಕಪ್ 2026 ಅರ್ಹತಾ ಸುತ್ತಿನ ತನ್ನ ಮೊದಲ ಪಂದ್ಯದಲ್ಲಿ ಇಂಡೊನೇಷ್ಯಾ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿದರು.

ಭಾರತ ತಂಡವು ಒಂದು ಅಂಕ ಪಡೆದು ಡಿ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಆತಿಥೇಯ ಮ್ಯಾನ್ಮಾರ್ ತಂಡವು 3 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ದಿನದ ಮತ್ತೊಂದು ಪಂದ್ಯದಲ್ಲಿ ಆತಿಥೇಯ ತಂಡವು 6–1ರಿಂದ ತುರ್ಕಮೆನಿಸ್ತಾನ್ ವಿರುದ್ಧ ಸುಲಭ ಗೆಲುವು ಸಾಧಿಸಿತು. 

ADVERTISEMENT

ಶುಕ್ರವಾರ ನಡೆಯಲಿರುವ ತನ್ನ ಎರಡನೇ ಪಂದ್ಯದಲ್ಲಿ ಭಾರತ ತಂಡವು ತುರ್ಕಮೆನಿಸ್ತಾನ್ ವಿರುದ್ಧ ಸೆಣಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.