ADVERTISEMENT

ಫುಟ್‌ಬಾಲ್‌: ವಿಶ್ವಕಪ್‌ ಫೈನಲ್ಸ್‌ ‘ಡ್ರಾ ಸಮಾರಂಭ’; ಇರಾನ್ ಬಹಿಷ್ಕಾರ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 12:38 IST
Last Updated 28 ನವೆಂಬರ್ 2025, 12:38 IST
<div class="paragraphs"><p>ಫುಟ್‌ಬಾಲ್</p></div>

ಫುಟ್‌ಬಾಲ್

   

ಟೆಹರಾನ್: ಮುಂದಿನ ವಾರ ವಾಷಿಂಗ್ಟನ್‌ನಲ್ಲಿ ನಡೆಯಲಿರುವ ವಿಶ್ವಕಪ್‌ ಫೈನಲ್ಸ್‌ ‘ಡ್ರಾ ಸಮಾರಂಭ’ವನ್ನು ಇರಾನ್ ಬಹಿಷ್ಕರಿಸಲಿದೆ. ನಿಯೋಗದ ಹಲವು ಸದಸ್ಯರಿಗೆ ಅಮೆರಿಕವು ವೀಸಾ ನಿರಾಕರಿಸಿದೆ ಎಂದು ಇರಾನ್ ಫುಟ್‌ಬಾಲ್‌ ಫೆಡರೇಷನ್‌ ಶುಕ್ರವಾರ ತಿಳಿಸಿದೆ.

‘ನಮ್ಮ ನಿರ್ಧಾರದ ಬಗ್ಗೆ ಫಿಫಾಕ್ಕೆ (ಅಂತರರಾಷ್ಟ್ರೀಯ ಫುಟ್‌ಬಾಲ್‌ ಫೆಡರೇಷನ್‌) ಮಾಹಿತಿ ನೀಡಿದ್ದೇವೆ. ಕ್ರೀಡೆಗೂ ಇದಕ್ಕೂ ಸಂಬಂಧವಿಲ್ಲ. ಇರಾನ್‌ ನಿಯೋಗವು ವಿಶ್ವಕಪ್‌ ಡ್ರಾದಲ್ಲಿ ಪಾಲ್ಗೊಳ್ಳುತ್ತಿಲ್ಲ’ ಎಂದು ಇರಾನ್‌ ಫುಟ್‌ಬಾಲ್‌ ಫೆಡರೇಷನ್‌ ವಕ್ತಾರ ಸ್ಟೇಟ್‌ ಟೆಲಿವಿಷನ್‌ಗೆ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.