ADVERTISEMENT

ಐಎಸ್‌ಎಲ್: ಡ್ರಾ ಪಂದ್ಯದಲ್ಲಿ ಬಿಎಫ್‌ಸಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2023, 17:17 IST
Last Updated 30 ನವೆಂಬರ್ 2023, 17:17 IST
<div class="paragraphs"><p>ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಎಸ್‌ಎಲ್ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡದ ಕರ್ಟಿಸ್ ಮೈನ್ ಗೋಲು ಗಳಿಸಲು ಯತ್ನಿಸಿದರು</p></div>

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಎಸ್‌ಎಲ್ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡದ ಕರ್ಟಿಸ್ ಮೈನ್ ಗೋಲು ಗಳಿಸಲು ಯತ್ನಿಸಿದರು

   

ಪ್ರಜಾವಾಣಿ ಚಿತ್ರ/ ಕಿಶೋರ್ ಕುಮಾರ್ ಬೋಳಾರ್

ಬೆಂಗಳೂರು: ಈ ಬಾರಿಯ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಎರಡನೇ ಜಯ ಸಾಧಿಸುವ ಬೆಂಗಳೂರು ಫುಟ್‌ಬಾಲ್ ಕ್ಲಬ್ ಆಸೆ ತವರಿನಂಗಳದಲ್ಲಿಯೂ ಕೈಗೂಡಲಿಲ್ಲ.

ADVERTISEMENT

ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಬಿಎಫ್‌ಸಿ ಮತ್ತು ಪಂಜಾಬ್ ಎಫ್‌ಸಿ ನಡುವಣ ಪಂದ್ಯವು 3–3ರಿಂದ ಡ್ರಾ ಆಯಿತು.

ಈ ಟೂರ್ನಿಯಲ್ಲಿ ಬಿಎಫ್‌ಸಿ ತಂಡವು  ಒಟ್ಟು ಎಂಟು ಪಂದ್ಯಗಳನ್ನು ಆಡಿದೆ. ಅದರಲ್ಲಿ ಒಂದು ಜಯ ಸಾಧಿಸದೆ. ನಾಲ್ಕು ಡ್ರಾ ಆಗಿದ್ದು, ಮೂರರಲ್ಲಿ ಸೋತಿದೆ.

ಪಂಜಾಬ್ ಎದುರಿನ ಪಂದ್ಯದಲ್ಲಿ ಸಮಬಲದ ಪೈಪೋಟಿ ನಡೆಯಿತು. ಬಿಎಫ್‌ಸಿಯ ಹರ್ಷ ಪತ್ರೆ (21ನೇ ನಿ), ಕರ್ಟೀಸ್ ಮೇನ್ (45+1) ಮತ್ತು ಜವಿ ಹರ್ನಾಂಡೇಜ್ (67ನೇ ನಿ) ಗೋಲು ಗಳಿಸಿದರು.

ಇದಕ್ಕುತ್ತರವಾಗಿ ಪಂಜಾಬ್ ತಂಡದ ನಿಕಿಲ್ ಪ್ರಭು (19ನೇ ನಿ), ದಿಮಿಟ್ರಿಸ್ ಚಾಟ್ಜಿಸಲಾಸ್ (26ನೇ ನಿ) ಮತ್ತು ಲೂಕಾ ಮೆಜೆಸಿನ್ (30ನೇ ನಿ) ಗೋಲು ಹೊಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.