ADVERTISEMENT

ಐಎಸ್‌ಎಲ್‌: ಅಗ್ರಸ್ಥಾನಕ್ಕೆ ಎಟಿಕೆಎಂಬಿ–ಹೈದರಾಬಾದ್‌ ಎಫ್‌ಸಿ ಪೈಪೋಟಿ

ಪಿಟಿಐ
Published 4 ಜನವರಿ 2022, 19:31 IST
Last Updated 4 ಜನವರಿ 2022, 19:31 IST
ಹೈದರಾಬಾದ್ ಎಫ್‌ಸಿ ಆಟಗಾರರು– ಪಿಟಿಐ ಚಿತ್ರ
ಹೈದರಾಬಾದ್ ಎಫ್‌ಸಿ ಆಟಗಾರರು– ಪಿಟಿಐ ಚಿತ್ರ   

ಮಡಗಾಂವ್‌:ಜುವಾನ್ ಫೆರಾಂಡೊ ಕೋಚ್‌ ಆಗಿ ಅಧಿಕಾರ ವಹಿಸಿಕೊಂಡ ನಂತರ ಗೆಲುವಿನ ಹಾದಿಗೆ ಹಿಂತಿರುಗಿರುವ ಎಟಿಕೆ ಮೋಹನ್ ಬಾಗನ್ (ಎಟಿಕೆಎಂಬಿ) ತಂಡವು, ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿಬುಧವಾರ ಹೈದರಾಬಾದ್ ಎಫ್‌ಸಿ ಸವಾಲು ಎದುರಿಸಲಿದೆ.

ಈ ಪಂದ್ಯ ಗೆದ್ದು ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಉಭಯ ತಂಡಗಳು ತವಕಿಸುತ್ತಿವೆ. ಎಟಿಕೆಎಂಬಿ ಸದ್ಯ ಎಂಟು ಪಂದ್ಯಗಳನ್ನು ಆಡಿದ್ದು, 14 ಪಾಯಿಂಟ್ಸ್‌ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಹೈದರಾಬಾದ್ ಕೂಡ ಇಷ್ಟೇ ಪಂದ್ಯಗಳ ಮೂಲಕ 15 ಪಾಯಿಂಟ್ಸ್ ಕಲೆಹಾಕಿದ್ದು, ಎರಡನೇ ಸ್ಥಾನದಲ್ಲಿದೆ.

ಸದ್ಯ ಮುಂಬೈ ತಂಡವು (ಒಂಬತ್ತು ಪಂದ್ಯ, 16 ಪಾಯಿಂಟ್ಸ್) ಮೊದಲ ಸ್ಥಾನದಲ್ಲಿದೆ.

ADVERTISEMENT

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.