ಭುವನೇಶ್ವರ : ಚೆನ್ನೈಯಿನ್ ಎಫ್‌ಸಿಯ ರಕ್ಷಣಾ ಕೋಟೆಯನ್ನು ಛಿದ್ರಗೊಳಿಸಿದ ಒಡಿಶಾ ಎಫ್‌ಸಿ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫಟ್‌ಬಾಲ್ ಟೂರ್ನಿಯಲ್ಲಿ ಸೋಮವಾರ 2–0 ಗೋಲುಗಳ ಜಯ ಸಾಧಿಸಿತು.
37ನೇ ನಿಮಿಷದಲ್ಲಿ ಜೆರಿ ಮತ್ತು 41ನೇ ನಿಮಿಷದಲ್ಲಿ ವಿನೀತ್ ಗೋಲು ಗಳಿಸಿ ಆತಿಥೇಯ ತಂಡದ ಗೆಲುವಿನ ರೂವಾರಿಗಳೆನಿಸಿದರು. ಈ ಜಯದೊಂದಿಗೆ ಒಡಿಶಾ ಎಫ್‌ಸಿ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.