ADVERTISEMENT

ಕಾಂಬೋಡಿಯಾ ಫುಟ್‌ಬಾಲ್‌ ತಂಡಕ್ಕೆ ಕೆಸುಕಿ ವ್ಯವಸ್ಥಾಪಕ

ಏಜೆನ್ಸೀಸ್
Published 12 ಆಗಸ್ಟ್ 2018, 19:30 IST
Last Updated 12 ಆಗಸ್ಟ್ 2018, 19:30 IST
ಕೆಸುಕಿ ಹೋಂಡ
ಕೆಸುಕಿ ಹೋಂಡ   

ಫಾಮ್‌ ಫೆನ್‌: ಜಪಾನ್‌ ಫುಟ್‌ಬಾಲ್‌ ತಂಡದ ಫಾರ್ವರ್ಡ್ ಆಟಗಾರನಾಗಿದ್ದ ಕೆಸುಕಿ ಹೋಂಡಾ ಅವರನ್ನು ಕಾಂಬೋಡಿಯಾ ಫುಟ್‌ಬಾಲ್ ತಂಡದ ವ್ಯವಸ್ಥಾಪಕರಾಗಿ ಭಾನುವಾರ ನೇಮಕ ಮಾಡಲಾಗಿದೆ.

ಜುಲೈನಲ್ಲಿ ನಡೆದ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಬೆಲ್ಜಿಯಂ ಎದುರಿನ ಪಂದ್ಯದಲ್ಲಿ ಸೋತ ನಂತರ ಹೋಂಡ ರಾಷ್ಟ್ರೀಯ ತಂಡದಿಂದ ನಿವೃತ್ತರಾಗಿದ್ದರು. ಈ ತಿಂಗಳ ಆರಂಭದಲ್ಲಿ ಮೆಲ್ಬರ್ನ್‌ನ ಸ್ಥಳೀಯ ತಂಡದಲ್ಲಿ ಆಡಲು ಒಪ್ಪಂದ ಮಾಡಿಕೊಂಡಿದ್ದರು.

ಭಾನುವಾರ ಕಾಂಬೋ ಡಿಯಾ ತಂಡದ ಜೊತೆ ಒಪ್ಪಂದ ಮಾಡಿಕೊಂಡ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಈ ತಂಡವನ್ನು ಸ್ಪರ್ಧಾತ್ಮಕ ಫುಟ್‌ಬಾಲ್‌ನಲ್ಲಿ ಆಡಲು ಸಜ್ಜುಗೊಳಿಸುವುದು ನನ್ನ ಮೊದಲ ಆದ್ಯತೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.