ಫುಟ್‌ಬಾಲ್
ಬೆಂಗಳೂರು: ಕರ್ನಾಟಕ ತಂಡವು ಜೂನಿಯರ್ ಬಾಲಕಿಯರ ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಷಿಪ್ (ಎರಡನೇ ಶ್ರೇಣಿ) ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಬೆಳಗಾವಿಯ ಸ್ಪೋರ್ಟಿಂಗ್ ಪ್ಲಾನೆಟ್ ಲವ್‌ಡೇಲ್ ಶಾಲೆಯ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ 1–3ರ ಅಂತರದಲ್ಲಿ ರಾಜಸ್ತಾನ ತಂಡದ ವಿರುದ್ಧ ಸೋಲನುಭವಿಸಿತು. ರಾಜಸ್ತಾನದ ಪರ ಮಂಜು ಕನ್ವರ್ (23ನೇ ನಿಮಿಷ), ಸಂಜು ಕನ್ವರ್ (36ನೇ ಮತ್ತು 63ನೇ ನಿಮಿಷ) ಗೋಲು ದಾಖಲಿಸಿದರು. ಕರ್ನಾಟಕದ ಪರ ರುತುಶ್ರೀ ನಂದನ್ 52ನೇ ನಿಮಿಷದಲ್ಲಿ ಏಕೈಕ ಗೋಲು ದಾಖಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.