ADVERTISEMENT

ಬಿ.ಸಿ. ರಾಯ್‌ ಫುಟ್‌ಬಾಲ್‌ ಟ್ರೋಫಿ: ಅಮೃತಸರದಲ್ಲಿ ಕರ್ನಾಟಕ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 16:20 IST
Last Updated 20 ಜುಲೈ 2025, 16:20 IST
<div class="paragraphs"><p>ಫುಟ್‌ಬಾಲ್‌</p></div>

ಫುಟ್‌ಬಾಲ್‌

   

ಬೆಂಗಳೂರು: ಪಂಜಾಬ್‌ನ ಅಮೃತಸರದಲ್ಲಿ ನಡೆಯುತ್ತಿರುವ ಬಿ.ಸಿ. ರಾಯ್‌ ಟ್ರೋಫಿ ಫುಟ್‌ಬಾಲ್‌ ಟೂರ್ನಿಯಲ್ಲಿ ಕರ್ನಾಟಕ ತಂಡವು 3–1ರಿಂದ ಒಡಿಶಾ ವಿರುದ್ಧ ಜಯಸಾಧಿಸಿತು.

ಜಿಎನ್‌ಡಿಯು ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಕರ್ನಾಟಕದ ಹೃಷಿಕೇಶ್‌ ಚರಣ್‌ ಅವರು ಎರಡು ಗೋಲು (7ನೇ ನಿ. ಹಾಗೂ 45+3ನೇ ನಿ.) ಗಳಿಸಿದರು. ಪವೀಶ್‌ ಕುಮಾರ್‌ ಒಂದು ಗೋಲು (17ನೇ ನಿ.) ಹೊಡೆದರು. ಒಡಿಶಾ ಪರ ಇಶಾಂತ್‌ ಕೌರ್‌ ಏಕೈಕ ಗೋಲು (6ನೇ ನಿ.) ದಾಖಲಿಸಿದರು.

ADVERTISEMENT

ಕರ್ನಾಟಕ ತಂಡವು, ಬೀಬಿ ರತ್ನಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ತನ್ನ ಮುಂದಿನ ಪಂದ್ಯದಲ್ಲಿ ಜಾರ್ಖಂಡ್‌ ಎದುರು ಸೆಣಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.