ADVERTISEMENT

ಫುಟ್‌ಬಾಲ್‌: ಮಾತೃ ಪ್ರತಿಷ್ಠಾನಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 17:33 IST
Last Updated 23 ಜುಲೈ 2024, 17:33 IST
<div class="paragraphs"><p> ಫುಟ್‌ಬಾಲ್‌</p></div>

ಫುಟ್‌ಬಾಲ್‌

   

ಬೆಂಗಳೂರು: ಮಾತೃ ಪ್ರತಿಷ್ಠಾನ ಫುಟ್‌ಬಾಲ್‌ ಕ್ಲಬ್‌ ತಂಡವು ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ (ಕೆಎಸ್‌ಎಫ್‌ಎ) ಆಶ್ರಯದಲ್ಲಿ ನಡೆಯುತ್ತಿರುವ ಕರ್ನಾಟಕ ಮಹಿಳೆಯರ ಲೀಗ್‌ನಲ್ಲಿ 1–0 ಯಿಂದ ಪಾಸ್‌ ಫುಟ್‌ಬಾಲ್‌ ಕ್ಲಬ್‌ ತಂಡವನ್ನು ಸೋಲಿಸಿತು.

ಮಾತೃ ಎಫ್‌ಸಿ ಪರ ಸಂತೋಷ್‌ (80ನೇ ನಿ) ಏಕೈಕ ಗೋಲು ದಾಖಲಿಸಿದರು.

ADVERTISEMENT

ತೀವ್ರ ಪೈಪೋಟಿಯಿಂದ ಕೂಡಿದ್ದ ರೆಬೆಲ್‌ ವುಮೆನ್ಸ್‌ ಮತ್ತು ಪಿಂಕ್‌ ಪ್ಯಾಂಥರ್ಸ್‌ ನಡುವಿನ ಪಂದ್ಯವು 1–1ರಿಂದ ಡ್ರಾ ಕಂಡಿತು. ರೆಬೆಲ್‌ ಪರ ಸಂಸ್ಕೃತಿ (90ನೇ ನಿ) ಮತ್ತು ಪ್ಯಾಂಥರ್ಸ್‌ ಪರ ಮಾನಸಾ ಕೆ. 89ನೇ ನಿಮಿಷದಲ್ಲಿ ಗೋಲು ದಾಖಲಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.