ADVERTISEMENT

ಸಂದೇಶ್ ಧರಿಸುತ್ತಿದ್ದ‌ 21 ಸಂಖ್ಯೆಯ ಜೆರ್ಸಿ ಬಳಸುವುದಿಲ್ಲ: ಬ್ಲಾಸ್ಟರ್ಸ್‌

ಪಿಟಿಐ
Published 23 ಮೇ 2020, 2:57 IST
Last Updated 23 ಮೇ 2020, 2:57 IST
ಸಂದೇಶ್‌ ಜಿಂಗಾನ್‌
ಸಂದೇಶ್‌ ಜಿಂಗಾನ್‌   

ಕೊಚ್ಚಿ: ಇತ್ತೀಚೆಗೆ ಕ್ಲಬ್‌ ತೊರೆದ ಸಂದೇಶ್ ಜಿಂಗಾನ್‌ ಅವರಿಗೆ ಗೌರವ ಸಮರ್ಪಣೆಯಾಗಿ, ಅವರು ಧರಿಸುತ್ತಿದ್ದ 21 ಸಂಖ್ಯೆಯ ಜೆರ್ಸಿಯನ್ನು ಇನ್ನು ಬಳಸುವುದಿಲ್ಲ ಎಂದು ಕೇರಳ ಬ್ಲಾಸ್ಟರ್ಸ್ ಫುಟ್‌ಬಾಲ್‌ ಕ್ಲಬ್‌ ತಿಳಿಸಿದೆ.‌

ಆರು ವರ್ಷಗಳವರೆಗೆ ತಂಡದಲ್ಲಿದ್ದ ಜಿಂಗಾನ್‌, ಬುಧವಾರ ತಮ್ಮ ಒಪ್ಪಂದವನ್ನು ಕೊನೆಗೊಳಿಸಿದ್ದರು.

‘ಸಂದೇಶ್ ಅವರು ಕ್ಲಬ್‌ಗೆ ತೋರಿದ ಬದ್ಧತೆ, ನಿಷ್ಠೆ ಹಾಗೂ ಪ್ರೀತಿಗೆ ವಂದನೆಗಳು. ಹೊಸ ಸವಾಲಿಗೆ ಸಿದ್ಧವಾಗುತ್ತಿರುವ ಅವರಿಗೆ ತಮ್ಮ ಕ್ಲಬ್‌ ಗೌರವ ಸಲ್ಲಿಸುತ್ತದೆ. ಇದರ ಭಾಗವಾಗಿ ಅವರು ಧರಿಸುತ್ತಿದ್ದ 21ನೇ ಸಂಖ್ಯೆಯ ಜೆರ್ಸಿಗೂ ವಿದಾಯ ಹೇಳುತ್ತಿದ್ದೇವೆ’ ಎಂದು ಕೇರಳ ಬ್ಲಾಸ್ಟರ್ಸ್‌ ತಂಡದ ಮಾಲೀಕ ನಿಖಿಲ್‌ ಭಾರದ್ವಾಜ್‌ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.