ADVERTISEMENT

ತವರಿನಲ್ಲಿ ‘ಡ್ರಾ’ ಮಾಡಿಕೊಂಡ ಕೇರಳ

ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 20:00 IST
Last Updated 8 ನವೆಂಬರ್ 2019, 20:00 IST

ಕೊಚ್ಚಿ: ಕೇರಳ ಬ್ಲಾಸ್ಟರ್ಸ್‌ ಮತ್ತು ಒಡಿಶಾ ಎಫ್‌ಸಿ ತಂಡಗಳ ನಡುವಣ ಐಎಸ್‌ಎಲ್‌ ಫುಟ್‌ಬಾಲ್ ಟೂರ್ನಿಯ ಪಂದ್ಯ ಶುಕ್ರವಾರ ಗೋಲಿಲ್ಲದೇ ‘ಡ್ರಾ’ ಆಯಿತು. ಲೀಗ್‌ನಲ್ಲಿ ಎರಡೂ ತಂಡಗಳಿಗೆ ಇದು ನಾಲ್ಕನೇ ಪಂದ್ಯವಾಗಿದ್ದು, ಮೊದಲ ‘ಡ್ರಾ’ ಎನಿಸಿತು.

ಇಲ್ಲಿನ ಜವಾಹರಲಾಲ್‌ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆತಿಥೇಯ ಕೇರಳ ತಂಡವೇ ಮೇಲುಗೈ ಸಾಧಿಸಿತ್ತು. ಆದರೆ ಕೆಲವು ಹಿನ್ನಡೆಯನ್ನೂ ಕಂಡಿತು. ಎರಡು ಬಾರಿ ‘ಪೆನಾಲ್ಟಿ’ಗಾಗಿ ಮಾಡಿದ್ದ ಮನವಿ ತಿರಸ್ಕೃತವಾಯಿತು. 32ನೇ ನಿಮಿಷ ಫಾರ್ವರ್ಡ್‌ ಆಟಗಾರ ಮೆಸ್ಸಿ ಬೌಲಿ ಅವರ ತಲೆಗೆ ಪೆಟ್ಟಾಗಿ ಅವರನ್ನು ಸ್ಕ್ಯಾನ್‌ಗಾಗಿ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು.

ಇದ್ದುದರಲ್ಲಿ ಸಮಾಧಾನದ ವಿಷಯ ಎಂದರೆ, ಈ ಡ್ರಾ ಮೂಲಕ ಕೇರಳ ತಂಡ, ಲೀಗ್‌ನಲ್ಲಿ ಎಂಟನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಏರಿದ್ದು.

ADVERTISEMENT

ಎರಡು ಉತ್ತಮ ಅವಕಾಶಗಳು ಕೇರಳಕ್ಕೆ ದೊರೆತಿದ್ದವು. 85ನೇ ನಿಮಿಷ ಕೆ.ಪಿ.ರಾಹುಲ್‌ ಗೋಲು ಅವಕಾಶಲ್ಲಿ ಗುರಿಯತ್ತ ಒದ್ದ ಚೆಂಡನ್ನು ಒಡಿಶಾ ಎಫ್‌ಸಿ ಗೋಲ್‌ಕೀಪರ್‌ ಡೊರನ್‌ಸೊರೊ ಅಮೋಘವಾಗಿ ತಡೆದರು. ಇದಕ್ಕೆ ಮೊದಲು, ಪಂದ್ಯದ 44ನೇ ನಿಮಿಷ ಹಾಕ್ಕು ಅವರ ಕ್ರಾಸ್‌ನಲ್ಲಿ ರಾಹುಲ್‌ ಗೋಲು ಯತ್ನ ವಿಫಲವಾಗಿತ್ತು.

ಕೇರಳಕ್ಕೆ ಆಡುವ ನೈಜಿರಿಯದ ಬಾರ್ತಲೋಮಿಯೊ ಒಗ್ಬೇಚೆಹೊಟ್ಟೆಕೆಟ್ಟ ಕಾರಣ ಈ ಪಂದ್ಯದಲ್ಲಿ ಆಡಲಿಲ್ಲ.

ಶನಿವಾರ ಎಟಿಕೆ ತಂಡ ಸಾಲ್ಟ್‌ಲೇಕ್‌ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಜಮ್‌ಶೆಡ್‌ಪುರ ಎಫ್‌.ಸಿ. ತಂಡವನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.