ADVERTISEMENT

ಉತ್ತಪ್ಪ ಹ್ಯಾಟ್ರಿಕ್‌ ಗೋಲು

ಕೊಂಕಣ್‌, ಚಿನ್ನಪ್ಪ ಫುಟ್‌ಬಾಲ್‌ ಕ್ಲಬ್‌ಗಳ ಜಯಭೇರಿ

​ಪ್ರಜಾವಾಣಿ ವಾರ್ತೆ
Published 16 ಮೇ 2019, 18:50 IST
Last Updated 16 ಮೇ 2019, 18:50 IST

ಬೆಂಗಳೂರು: ಇಲ್ಲಿನಡೆಯುತ್ತಿರುವ ಬಿಡಿಎಫ್‌ಎ 'ಸಿ’ ಡಿವಿಜನ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ನಡೆದ ‘ಐ’ ವಲಯದ ಫುಟ್‌ಬಾಲ್‌ ಪಂದ್ಯದಲ್ಲಿ ಕೊಂಕಣ್‌ ಎಫ್‌ಸಿ ತಂಡವು ಚಿನ್ನಪ್ಪ ಎಫ್‌ಸಿ ತಂಡವನ್ನು 5–1 ಗೋಲುಗಳ ಅಂತರದಿಂದ ಮಣಿಸಿತು. ಕೊಂಕಣ್‌ ಪರ ಅಂತರರಾಷ್ಟ್ರೀಯ ಆಟಗಾರ ಎಸ್‌.ಕೆ.ಉತ್ತಪ್ಪ ಹ್ಯಾಟ್ರಿಕ್‌ ಬಾರಿಸಿದರು.

ಉತ್ತಪ್ಪ ಅವರು ತಂಡದ ಪರ ಒಟ್ಟು ನಾಲ್ಕು ಗೋಲುಗಳನ್ನು (12, 14, 27 ಹಾಗೂ 60ನೇ ನಿಮಿಷ) ಸಿಡಿಸಿ ಗಮನಸೆಳೆದರು. ನಿತಿನ್‌(39ನೇ ನಿಮಿಷ) ಅವರು ಮತ್ತೊಂದು ಗೋಲು ಗಳಿಸಿ ಜಯದಲ್ಲಿ ಅಲ್ಪ ಕಾಣಿಕೆ ನೀಡಿದರು. ಚಿನ್ನಪ್ಪ ಗಾರ್ಡನ್‌ ಎಫ್‌ಸಿ ಪರ ವಿಘ್ನೇಶ್‌ (26ನೇ ನಿಮಿಷ) ಏಕೈಕ ಗೋಲು ಗಳಿಸಿದರು. ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ಬಾಯ್ಸ್‌ ಎಫ್‌ಸಿ ತಂಡವು ಮಾಡರ್ನ್‌ ಬಾಯ್ಸ್‌ ತಂಡವನ್ನು 2–1 ಗೋಲುಗಳಿಂದ ಮಣಿಸಿತು. ವಿಜೇತ ತಂಡದ ಪರ ಆ್ಯರನ್‌ (20ನೇ ನಿಮಿಷ) ಹಾಗೂ ಇಸಯ್ಯ (52ನೇ ನಿಮಿಷ) ಗೋಲು ಬಾರಿಸಿ ಮಿಂಚಿದರು. ಮಾಡರ್ನ್ ಎಫ್‌ಸಿ ಪರ ಮೋನಿಶ್ (6ನೇ ನಿಮಿಷ) ಗಳು ದಾಖಲಿಸಿದರು.

ಶುಕ್ರವಾರ ನಡೆಯುವ ‘ಜೆ’ ವಲಯದ ಪಂದ್ಯಗಳಲ್ಲಿ ಮುಸ್ಲಿಂ ಹೀರೋಸ್‌ ತಂಡದ ಎದುರು ಅಗರಂ ಎಫ್‌ಸಿ ಹಾಗೂ ಬಸವನಗುಡಿ ಎಫ್‌ಸಿ ವಿರುದ್ಧ ಎಕ್ಸೆಲ್ಸಿಯರ್‌ ಎಫ್‌ಸಿ ತಂಡಗಳು ಸೆಣಸಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.