ಸೋಲ್: ಸೇನಾ ತರಬೇತಿಯ ಕುರಿತು ತಪ್ಪು ಮಾಹಿತಿ ನೀಡಿದ ಕಾರಣ ದಕ್ಷಿಣ ಕೊರಿಯಾದ ಫುಟ್‌ಬಾಲ್ ಆಟಗಾರ ಜಾಂಗ್ ಹ್ಯೂನ್ ಸೂ ಮೇಲೆ ಕೊರಿಯಾ ಫುಟ್‌ಬಾಲ್ ಸಂಸ್ಥೆ ಅಜೀವ ನಿಷೇಧ ಹೇರಿದೆ. ಅವರಿಗೆ ₹ 1 ಕೋಟಿ 89 ಲಕ್ಷ ಮೊತ್ತದ ದಂಡವನ್ನೂ ಹೇರಲಾಗಿದೆ.
ಸೂ ಅವರು ದೇಶಿ ಫುಟ್‌ಬಾಲ್‌ನಲ್ಲಿ ಎಫ್‌ಸಿ ಟೋಕಿಯೊ ತಂಡದ ಪರವಾಗಿ ಆಡುತ್ತಿದ್ದಾರೆ. ರಾಷ್ಟ್ರೀಯ ತಂಡಕ್ಕಾಗಿ 58 ಪಂದ್ಯಗಳನ್ನು ಆಡಿದ್ದಾರೆ. 2016ರ ಒಲಿಂಪಿಕ್ಸ್‌ನಲ್ಲೂ ಕಣಕ್ಕೆ ಇಳಿದಿದ್ದರು.
ದಕ್ಷಿಣ ಕೊರಿಯಾದ ಪ್ರತಿಯೊಬ್ಬ ಆರೋಗ್ಯವಂತ ನಾಗರಿಕ 21 ತಿಂಗಳ ಸೈನಿಕ ಸೇವೆಯಲ್ಲಿ ತೊಡಗುವುದು ಕಡ್ಡಾಯ. ಒಲಿಂಪಿಕ್ಸ್ ಮತ್ತು ಏಷ್ಯನ್ ಕ್ರೀಡಾಕೂಟಗಳಲ್ಲಿ ಪದಕ ಗೆದ್ದವರಿಗೆ ಇದರಿಂದ ರಿಯಾಯಿತಿ ಇದೆ. ಆದರೆ ಅವರು 60 ದಿನಗಳ ಸೈನಿಕ ತರಬೇತಿ ಪಡೆದುಕೊಳ್ಳಬೇಕು ಮತ್ತು ಕ್ರೀಡೆಗೆ ಸಂಬಂಧಿಸಿ 544 ತಾಸುಗಳ ಸೇವೆ ಸಲ್ಲಿಸಬೇಕು. ಈ ತರಬೇತಿ ಮತ್ತು ಸೇವೆಗೆ ಸಂಬಂಧಿಸಿ ಜಾಂಗ್ ತಪ್ಪು ಪ್ರಮಾಣ ಪತ್ರ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.