ಬೆಂಗಳೂರು: ಅಕ್ಸಾ ಸೈಯದ್ ಹಾಗೂ ನಮಿತಾ ಅವರು ದಾಖಲಿಸಿದ ತಲಾ ಐದು ಗೋಲುಗಳ ನೆರವಿನಿಂದ ರೆಬೆಲ್ಸ್ ಎಫ್‌ಸಿ ತಂಡವು ಕೆಎಸ್‌ಎಫ್ಎ ಎ ಡಿವಿಷನ್ ಮಹಿಳಾ ಫುಟ್‌ಬಾಲ್ ಟೂರ್ನಿಯಲ್ಲಿ 22–0 ಅಂತರದಿಂದ ಜಿಆರ್‌ಕೆ ಎಫ್‌ಸಿ ಎದುರು ಗೆದ್ದಿತು.
ಎ ಗುಂಪಿನ ಈ ಪಂದ್ಯದಲ್ಲಿ ವಿಜೇತ ತಂಡದ ಪರ ನಮಿತಾ 3, 7, 8, 15 ಹಾಗೂ 35ನೇ ನಿಮಿಷ ಗೋಲು ದಾಖಲಿಸಿದರು. ಅಕ್ಸಾ ಅವರು 43, 50, 52, 53 ಹಾಗೂ 70ನೇ ನಿಮಿಷಗಳಲ್ಲಿ ಕಾಲ್ಚಳಕ ತೋರಿದರು. ಪುಷ್ಪಾ ಹಾಗೂ ಆದ್ಮಿಕಾ ಭೋಸ್ಲೆ ತಲಾ ಮೂರು ಬಾರಿ ಚೆಂಡನ್ನು ಗುರಿ ಮುಟ್ಟಿಸಿದರು.
ಬಿ ಗುಂಪಿನ ಪಂದ್ಯದಲ್ಲಿ ಇಂಡಿಯನ್ ಫುಟ್‌ಬಾಲ್ ಫ್ಯಾಕ್ಟರಿ ತಂಡವು 7–1ರಿಂದ ಬೆಂಗಳೂರು ಸಿಟಿ ಎಫ್‌ಸಿ ಎದುರು ಜಯಭೇರಿ ಬಾರಿಸಿತು. ಫುಟ್‌ಬಾಲ್ ಫ್ಯಾಕ್ಟರಿ ತಂಡದ ಕಾರ್ತಿಕಾ ಎರಡು ಗೋಲು ದಾಖಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.