ಫುಟ್‌ಬಾಲ್
ಬೆಂಗಳೂರು: ಮಿಸಾಕಾ ಯುನೈಟೆಡ್ ಎಫ್‌ಸಿ ತಂಡವು ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಕರ್ನಾಟಕ ಮಹಿಳೆಯರ ಲೀಗ್‌ನಲ್ಲಿ 2–0ಯಿಂದ ರೂಟ್ ಎಫ್‌ಸಿ ತಂಡವನ್ನು ಸೋಲಿಸಿತು.
ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮಿಸಾಕಾ ಯುನೈಟೆಡ್ ಎಫ್‌ಸಿ ಪರ ಮರಿಯಾನಾ ಜೋನ್ಸ್ (40 ಮತ್ತು 81ನೇ ನಿ) ಎರಡು ಗೋಲು ದಾಖಲಿಸಿದರು.
ದಿನದ ಮತ್ತೊಂದು ಪಂದ್ಯದಲ್ಲಿ ಕೆಂಪ್ ಎಫ್‌ಸಿ ತಂಡವು 3–2ರಿಂದ ಮಾತೃ ಪ್ರತಿಷ್ಠಾನ ತಂಡವನ್ನು ಸೋಲಿಸಿತು. ಕೆಂಪ್ ಎಫ್‌ಸಿ ಪರ ವ್ಯಾಸಪುರಂ ನಂದಿನಿ (7ನೇ ನಿಮಿಷ), ಪ್ರಿಯದರ್ಶಿನಿ (39ನೇ ನಿ), ಖುಷ್ಬು (79ನೇ ನಿ) ತಲಾ ಒಂದು ಗೋಲು ದಾಖಲಿಸಿದರು. ಮಾತೃ ಪ್ರತಿಷ್ಠಾನ ಪರ ಪ್ರೀತಿ (48ನೇ ನಿ), ಜನನಿ (58ನೇ ನಿ) ಗೋಲು ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.