ADVERTISEMENT

ರೂಟ್ಸ್‌ ಎಫ್‌ಸಿ ತಂಡಕ್ಕೆ ರೋಚಕ ಜಯ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 17:08 IST
Last Updated 21 ನವೆಂಬರ್ 2025, 17:08 IST
<div class="paragraphs"><p>ಫುಟ್‌ಬಾಲ್‌</p></div>

ಫುಟ್‌ಬಾಲ್‌

   

ಬೆಂಗಳೂರು: ಸಾಗರ್‌ ಶೇಖರ್ (90ನೇ ನಿ.) ಅವರು ಅಂತಿಮ ಕ್ಷಣದಲ್ಲಿ ಗಳಿಸಿದ ಗೋಲಿನ ನೆರವಿನಿಂದ ರೂಟ್ಸ್‌ ಫುಟ್‌ಬಾಲ್‌ ಕ್ಲಬ್‌ ತಂಡವು ಕೆಎಸ್‌ಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ ಪಂದ್ಯದಲ್ಲಿ 2–1ರಿಂದ ಯುನೈಟೆಡ್‌ ಸ್ಟಾರ್ಸ್‌ ಎಫ್‌ಸಿ ತಂಡದ ವಿರುದ್ಧ ರೋಚಕ ಜಯ ದಾಖಲಿಸಿತು.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ, ರೂಟ್ಸ್‌ ಎಫ್‌ಸಿ ತಂಡದ ಎನ್‌.ರಾಜೀವ್‌ (43ನೇ ನಿ.) ಮೊದಲಾರ್ಧದ ಮುಕ್ತಾಯದ ವೇಳೆ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರು. ಬಳಿಕ, ಯುನೈಟೆಡ್‌ ತಂಡದ ವಿನಯ್‌ ಆರ್‌.(65ನೇ ನಿ.) ಗೋಲು ಹೊಡೆದು ಸಮಬಲ ಸಾಧಿಸಿದರು. ಪಂದ್ಯ ಡ್ರಾದತ್ತ ಸಾಗುತ್ತಿದ್ದಾಗ, ಸಾಗರ್‌ ಅವರು ಅಮೋಘ ಆಟದೊಂದಿಗೆ ಗೆಲುವಿನ ರೂವಾರಿಯಾದರು.

ADVERTISEMENT

ದಿನದ ಇನ್ನೊಂದು ಪಂದ್ಯದಲ್ಲಿ ಪರಿಕ್ರಮ ಎಫ್‌ಸಿ ತಂಡವು 1–0ಯಿಂದ ಎಚ್‌ಎಎಲ್‌ ಎಫ್‌ಸಿ ತಂಡವನ್ನು ಮಣಿಸಿತು. ಪರಿಕ್ರಮ ತಂಡದ ಎಚ್‌.ಕಿಪ್‌ಜೆನ್‌ (15ನೇ ನಿ.) ಪಂದ್ಯದ ಏಕೈಕ ಗೋಲು ಹೊಡೆದರು.

ಮತ್ತೊಂದು ಪಂದ್ಯದಲ್ಲಿ ಸಂಘಟಿತ ಆಟವಾಡಿದ ಸೌತ್‌ ಯುನೈಟೆಡ್‌ ಎಫ್‌ಸಿ ತಂಡವು 4–0 ಗೋಲುಗಳಿಂದ ಬೆಂಗಳೂರು ಡ್ರೀಮ್‌ ಯುನೈಟೆಡ್‌ ತಂಡವನ್ನು ಸುಲಭವಾಗಿ ಸೋಲಿಸಿತು. ಸೌತ್‌ ಯುನೈಟೆಡ್‌ ತಂಡದ ಮೊಹಮ್ಮದ್‌ ಕೈಫ್‌ (9ನೇ ನಿ.), ರಿನ್ಶಿದ್‌ ವಿ. (45+2ನೇ ನಿ.), ಪ್ರಜ್ವಲ್‌ ವಿ. ಗೌಡ (57ನೇ ನಿ.) ಹಾಗೂ ಎಂ. ದನಿಯಾಲ್‌ (79) ಅವರು ತಲಾ ಒಂದು ಗೋಲು ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.