ಎಫ್‌ಸಿ ರಿಯಲ್ ಬೆಂಗಳೂರಿನ ಸೈಯದ್ ಅಹ್ಮದ್ (ಎಡ) ಮತ್ತು ರೆಬೆಲ್ಸ್ ಎಫ್‌ಸಿಯ ಮುಮಿನ್ ಬಶೀರ್ ಅವರು ಚೆಂಡಿಗಾಗಿ ಸೆಣಸಾಟ ನಡೆಸಿದರು
–ಪ್ರಜಾವಾಣಿ ಚಿತ್ರ: ಬಿ.ಕೆ. ಜನಾರ್ದನ
ಬೆಂಗಳೂರು: ಸಯ್ಯದ್ ಅಹ್ಮದ್ ಅವರ ಆಟದ ನೆರವಿನಿಂದ ಎಫ್‌ಸಿ ರಿಯಲ್ ಬೆಂಗಳೂರು ತಂಡವು ಕೆಎಸ್‌ಎಫ್‌ಎ ಸೂಪರ್ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 3–0 ಗೋಲುಗಳಿಂದ ರೆಬೆಲ್ಸ್ ಎಫ್‌ಸಿ ತಂಡವನ್ನು ಮಣಿಸಿತು.
ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ರಿಯಲ್ ತಂಡದ ಪರ ಸಯ್ಯದ್ (41ನೇ ಮತ್ತು 73ನೇ) ಎರಡು ಗೋಲು, ವೈಶಾಖ ಎ. (12ನೇ) ಒಂದು ಗೋಲು ಗಳಿಸಿದರು.
ಇತರ ಪಂದ್ಯಗಳಲ್ಲಿ ಬೆಂಗಳೂರು ಸಿಟಿ ಎಫ್‌ಸಿ ತಂಡವು 2–1 ಗೋಲುಗಳಿಂದ ರೂಟ್ಸ್ ಎಫ್‌ಸಿ ತಂಡವನ್ನು ಸೋಲಿಸಿತು. ಎಎಸ್‌ಸಿ ಅಂಡ್ ಸೆಂಟರ್ ಎಫ್‌ಸಿ ತಂಡವು ಗೋಲುರಹಿತವಾಗಿ ಎಫ್‌ಸಿ ಬೆಂಗಳೂರು ಯುನೈಟೆಡ್ ಜೊತೆ ಡ್ರಾ ಸಾಧಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.