ADVERTISEMENT

ಫುಟ್‌ಬಾಲ್‌: ಅಗ್ನಿಪುತ್ರ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 19:09 IST
Last Updated 5 ನವೆಂಬರ್ 2025, 19:09 IST
ಎಂಎಫ್‌ಎಆರ್‌ ಸ್ಟುಡೆಂಟ್ಸ್‌ ಯೂನಿಯನ್‌ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಗೋಲು ಗಳಿಸಿ ಸಂಭ್ರಮಿಸಿದ ಎಫ್‌ಸಿ ಅಗ್ನಿಪುತ್ರ ತಂಡದ ಗೌತಮ್‌ ಆರ್‌. (ಎಡ) –ಚಿತ್ರ: ಬಿ.ಕೆ.ಜನಾರ್ದನ
ಎಂಎಫ್‌ಎಆರ್‌ ಸ್ಟುಡೆಂಟ್ಸ್‌ ಯೂನಿಯನ್‌ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಗೋಲು ಗಳಿಸಿ ಸಂಭ್ರಮಿಸಿದ ಎಫ್‌ಸಿ ಅಗ್ನಿಪುತ್ರ ತಂಡದ ಗೌತಮ್‌ ಆರ್‌. (ಎಡ) –ಚಿತ್ರ: ಬಿ.ಕೆ.ಜನಾರ್ದನ   

ಬೆಂಗಳೂರು: ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಎಫ್‌ಸಿ ಅಗ್ನಿಪುತ್ರ ತಂಡವು ಕೆಎಸ್‌ಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ ಪಂದ್ಯದಲ್ಲಿ ಬುಧವಾರ 3–1ರಿಂದ ಎಂಎಫ್‌ಎಆರ್‌ ಸ್ಟುಡೆಂಟ್ಸ್‌ ಯೂನಿಯನ್‌ ಎಫ್‌ಸಿ ತಂಡವನ್ನು ಮಣಿಸಿತು.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಲ್ಮಾನ್‌ ಉಲ್‌ ಫಾರಿಸ್‌ ಅವರು 34ನೇ ನಿಮಿಷದಲ್ಲಿ ಗೋಲು ಗಳಿಸಿ ಎಂಎಫ್‌ಎಆರ್‌ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಅಗ್ನಿಪುತ್ರ ತಂಡದ ಕ್ರಿಸ್ಪಿನ್‌ ಕ್ಲೀಟಸ್‌ ಅವರು 37ನೇ ನಿಮಿಷದಲ್ಲಿ ಗೋಲು ಹೊಡೆದು ಸಮಬಲ ಸಾಧಿಸಿದರು. ಬಳಿಕ, ಗೌತಮ್‌ ಆರ್‌. (61ನೇ ನಿ.) ಹಾಗೂ ಅಫ್ಜರ್‌ ನೂರಾನಿ (99+2ನೇ ನಿ.) ಅವರು ಗೋಲು ಹೊಡೆದು ಜಯ ತಂದಿತ್ತರು.

ಇನ್ನೊಂದು ಪಂದ್ಯದಲ್ಲಿ ಕೊಡಗು ಎಫ್‌ಸಿ ತಂಡವು 3–0ಯಿಂದ ಬೆಂಗಳೂರು ಸಿಟಿ ಫುಟ್‌ಬಾಲ್‌ ಕ್ಲಬ್‌ ತಂಡದ ವಿರುದ್ಧ ಸುಲಭ ಜಯ ಸಾಧಿಸಿತು. ಲಾಲ್ಕರಾಸ್ಮಾವಿಯಾ (35ನೇ ನಿ. ಹಾಗೂ 57ನೇ ನಿ.) ಅವಳಿ ಗೋಲು ಹೊಡೆದರೆ, ಬಿ.ಎಸ್‌. ಮೃಣಾಲ್‌ ಮುತ್ತಣ್ಣ (8ನೇ ನಿ.) ಒಂದು ಗೋಲು ಹೊಡೆದರು.

ADVERTISEMENT

ಮತ್ತೊಂದು ಪಂದ್ಯದಲ್ಲಿ ವಿ.ವಿಘ್ನೇಶ್‌ (41ನೇ ನಿ.) ಹಾಗೂ ಎನ್‌. ರಾಕೇಶ್‌ ಸಿಂಗ್‌ (89ನೇ ನಿ.) ಅವರ ಗೋಲಿನ ನೆರವಿನಿಂದ ಕಿಕ್‌ಸ್ಟಾರ್ಟ್‌ ಫುಟ್‌ಬಾಲ್‌ ಕ್ಲಬ್‌ ತಂಡವು 2–0ಯಿಂದ ಸ್ಪೋರ್ಟಿಂಗ್‌ ಕ್ಲಬ್‌ ತಂಡವನ್ನು ಸುಲಭವಾಗಿ ಮಣಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.