ಲಯೋನೆಲ್ ಮೆಸ್ಸಿ
ತಿರುವನಂತಪುರಂ: ಶ್ರೇಷ್ಠ ಫುಟ್‌ಬಾಲ್ ಆಟಗಾರ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಅವರು ನವೆಂಬರ್ ತಿಂಗಳಿನಲ್ಲಿ ತಮ್ಮ ದಕ್ಷಿಣ ಅಮೆರಿಕಾ ತಂಡದ ಜೊತೆಗೆ ಕೊಚ್ಚಿ ಪ್ರವಾಸ ಕೈಗೊಂಡಾಗ ಆಸ್ಟ್ರೇಲಿಯಾ ವಿರುದ್ಧ ಪಂದ್ಯ ಆಡುವ ಸಾಧ್ಯತೆ ಇದೆ ಎಂದು ಕ್ರೀಡಾ ಇಲಾಖೆಯ ಅಧಿಕೃತ ಮೂಲಗಳು ಮಾಹಿತಿ ನೀಡಿವೆ.
ಈ ಸೌಹಾರ್ದಯುತ ಪಂದ್ಯಕ್ಕಾಗಿ ಯಾವುದೇ ಅಧಿಕೃತ ದಿನಾಂಕ ನಿಗದಿಯಾಗಿಲ್ಲ. ನವೆಂಬರ್ 12 ರಿಂದ 18ರ ನಡುವೆ ದಕ್ಷಿಣ ಅಮೇರಿಕಾ ತಂಡ ಕೇರಳಕ್ಕೆ ಬಂದಾಗ ಆಸ್ಟ್ರೇಲಿಯಾ ತಂಡದ ವಿರುದ್ಧ ಪಂದ್ಯ ಆಡಲಿದೆ ಎಂದು ಮೂಲಗಳು ತಿಳಿಸಿವೆ.
2022ರಲ್ಲಿ ವಿಶ್ವಕಪ್ ಗೆದ್ದ ದಕ್ಷಿಣ ಅಮೇರಿಕಾ ತಂಡವನ್ನು ಆಸ್ಟ್ರೇಲಿಯಾ ಎದುರಿಸಲಿದೆ ಎಂದು ಮೂಲಗಳು ತಿಳಿಸಿವೆ.
ಮೆಸ್ಸಿ ತಂಡದ ಕೇರಳ ಭೇಟಿ ಕುರಿತು ಕೆಲವು ವಿವಾದಗಳು ಉಂಟಾಗಿದ್ದವು. ಇದೇ ವರ್ಷದ ಆಗಸ್ಟ್ ತಿಂಗಳ ಆರಂಭದಲ್ಲಿ ಕೆಲವು ವರದಿಗಳು, ಮೆಸ್ಸಿಯವರ ದಕ್ಷಿಣ ಅಮೆರಿಕಾ ತಂಡ ರಾಜ್ಯಕ್ಕೆ ಬರುವುದಿಲ್ಲ ಎಂದು ತಿಳಿಸಿದ್ದವು. ಇದರ ಹೊರತಾಗಿಯೂ ಕೇರಳ ರಾಜ್ಯದ ಕ್ರೀಡಾ ಸಚಿವರಾಗಿರುವ ವಿ ಅಬ್ದುರಹಿಮಾನ್ ಅವರು ಮೆಸ್ಸಿಯವರ ತಂಡ ನವೆಂಬರ್‌ನಲ್ಲಿ ಕೇರಳಕ್ಕೆ ಆಗಮಿಸಲಿದೆ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.