ADVERTISEMENT

FIFA World Cup: ಮೆಸ್ಸಿಗೆ ‘ಗೋಲ್ಡನ್‌ ಬಾಲ್‌’, ಎಂಬಾಪೆಗೆ ‘ಗೋಲ್ಡನ್‌ ಬೂಟ್‌’

ಪಿಟಿಐ
Published 19 ಡಿಸೆಂಬರ್ 2022, 2:15 IST
Last Updated 19 ಡಿಸೆಂಬರ್ 2022, 2:15 IST
ಎಂಜೊ ಫೆರ್ನಾಂಡಿಜ್‌, ಲಯೊನೆಲ್‌ ಮೆಸ್ಸಿ, ಎಮಿಲಿಯಾನೊ ಮಾರ್ಟಿನೆಜ್, ಕಿಲಿಯನ್‌ ಎಂಬಾಪೆ
ಎಂಜೊ ಫೆರ್ನಾಂಡಿಜ್‌, ಲಯೊನೆಲ್‌ ಮೆಸ್ಸಿ, ಎಮಿಲಿಯಾನೊ ಮಾರ್ಟಿನೆಜ್, ಕಿಲಿಯನ್‌ ಎಂಬಾಪೆ   

ದೋಹಾ: ಫಿಫಾ ಫುಟ್‌ಬಾಲ್ ವಿಶ್ವಕಪ್‌ ಟೂರ್ನಿಯ ಶ್ರೇಷ್ಠ ಆಟಗಾರನಿಗೆ ನೀಡುವ ‘ಗೋಲ್ಡನ್‌ ಬಾಲ್‌’ ಪ್ರಶಸ್ತಿಯನ್ನು ಶ್ರೇಷ್ಠ ಪ್ರದರ್ಶನದೊಂದಿಗೆ ಲಯೊನೆಲ್‌ ಮೆಸ್ಸಿ ತಮ್ಮದಾಗಿಸಿಕೊಂಡರು. ಈ ಮೂಲಕಮೆಸ್ಸಿ ಜಾಗತಿಕ ಫುಟ್‌ಬಾಲ್ ಇತಿಹಾಸದಲ್ಲಿ ಅಚ್ಚಳಿಯದಂತೆ ತಮ್ಮ ಹೆಸರನ್ನೊತ್ತಿದ್ದರು.

ಕತಾರ್‌ನಲ್ಲಿ ನಡೆದ ಈ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು ಏಳು ಗೋಲುಗಳನ್ನು ಮೆಸ್ಸಿ ಗಳಿಸಿದ್ದರು.

ಟೂರ್ನಿಯಲ್ಲಿ ಅತಿಹೆಚ್ಚು ಗೋಲು ಗಳಿಸಿದ ಆಟಗಾರನಿಗೆ ನೀಡುವ ‘ಗೋಲ್ಡನ್‌ ಬೂಟ್‌’ ಪ್ರಶಸ್ತಿಯನ್ನು ಫ್ರಾನ್ಸ್‌ ತಂಡದ ನಾಯಕ ಕಿಲಿಯನ್‌ ಎಂಬಾಪೆ ತಮ್ಮದಾಗಿಸಿಕೊಂಡರು. ಫೈನಲ್‌ನಲ್ಲಿ ಹ್ಯಾಟ್ರಿಕ್‌ ಸಾಧನೆಯೊಂದಿಗೆ ಅವರು ಒಟ್ಟು ಎಂಟು ಗೋಲುಗಳನ್ನು ಗಳಿಸಿದರು.

ADVERTISEMENT

ಟೂರ್ನಿಯ ಅತ್ಯುತ್ತಮ ಗೋಲ್‌ಕೀಪರ್‌ಗೆ ನೀಡುವ ಗೋಲ್ಡನ್‌ ಗ್ಲೋವ್‌ ಪ್ರಶಸ್ತಿಗೆ ಅರ್ಜೆಂಟೀನಾದ ಎಮಿಲಿಯಾನೊ ಮಾರ್ಟಿನೆಜ್ ಪಾತ್ರರಾದರು. ಅರ್ಜೆಂಟೀನಾದವರೇ ಆದ 21 ವರ್ಷದ ಎಂಜೊ ಫೆರ್ನಾಂಡಿಜ್‌ ಅವರು ‘ಟೂರ್ನಿಯ ಉದಯೋನ್ಮುಖ ಯುವ ಆಟಗಾರ’ ಗೌರವ ತಮ್ಮದಾಗಿಸಿಕೊಂಡರು.

ವಿಶ್ವಕಪ್‌ ಟೂರ್ನಿಯ ಇತಿಹಾಸದಲ್ಲಿ ಫೈನಲ್‌ ಪಂದ್ಯದಲ್ಲಿ ಹ್ಯಾಟ್ರಿಕ್‌ ಗೋಲು ಗಳಿಸಿದ ಎರಡನೇ ಆಟಗಾರ ಎಂಬ ಗೌರವವನ್ನು ಕಿಲಿಯಾನ್‌ ಎಂಬಾಪೆ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.