ADVERTISEMENT

ಎಎಫ್‌ಸಿ ಚಾಂಪಿಯನ್ಸ್‌ ಲೀಗ್‌: ಮುಂಬೈ ಸಿಟಿ ಎಫ್‌ಸಿಗೆ ನಿರಾಸೆ

ಪಿಟಿಐ
Published 19 ಸೆಪ್ಟೆಂಬರ್ 2023, 19:06 IST
Last Updated 19 ಸೆಪ್ಟೆಂಬರ್ 2023, 19:06 IST
<div class="paragraphs"><p>ಫುಟ್‌ಬಾಲ್‌ </p></div>

ಫುಟ್‌ಬಾಲ್‌

   

ಪುಣೆ: ಮುಂಬೈ ಸಿಟಿ ಎಫ್‌ಸಿ ತಂಡ, ಎಎಫ್‌ಸಿ ಚಾಂಪಿಯನ್ಸ್‌ ಲೀಗ್‌ (ಎಸಿಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಸೋಲಿನೊಂದಿಗೆ ಆರಂಭಿಸಿತು.

ಸೋಮವಾರ ಇಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ತಂಡ 0–2 ಗೋಲುಗಳಿಂದ ಇರಾನ್‌ನ ನಸಾಜಿ ಮಜಂದರನ್‌ ಕ್ಲಬ್‌ ಎದುರು ಪರಾಭವಗೊಂಡಿತು.

ADVERTISEMENT

ಎಹ್ಸಾನ್‌ ಹೊಸೇನಿ (34ನೇ ನಿ.) ಮತ್ತು ಮೊಹಮ್ಮದ್‌ರೆಜಾ ಅಝಾದಿ (62ನೇ ನಿ.) ಅವರು ನಸಾಜಿ ಪರ ಗೋಲು ಗಳಿಸಿದರು.

ಆಕ್ರಮಣಕಾರಿ ಪ್ರದರ್ಶನ ನೀಡಿದ ಮುಂಬೈ ತಂಡ ಗೋಲು ಗಳಿಸಲು ಕೆಲವೊಂದು ಉತ್ತಮ ಪ್ರಯತ್ನ ನಡೆಸಿತಾದರೂ ಯಶಸ್ಸು ದೊರೆಯಲಿಲ್ಲ. ಒಂಬತ್ತನೇ ನಿಮಿಷದಲ್ಲಿ ಲಾಲ್‌ಲಿಯಾನ್‌ಜುವಾಲ ಚಾಂಗ್ಟೆ ಅವರು ಗೋಲು ಗಳಿಸುವ ಅವಕಾಶ ಹಾಳುಮಾಡಿಕೊಂಡರು. ಮೊದಲ ಅವಧಿಯ ಇಂಜುರಿ ಅವಧಿಯಲ್ಲಿ ಬಿಪಿನ್‌ ಅವರು ಒದ್ದ ಚೆಂಡು ಅಲ್ಪ ಅಂತರದಿಂದ ಹೊರಕ್ಕೆ ಹೋಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.