ADVERTISEMENT

ಮುಂಬೈ ಸಿಟಿ ಎಫ್‌ಸಿಗೆ ರಣವಾಡೆ

ಪಿಟಿಐ
Published 30 ಅಕ್ಟೋಬರ್ 2020, 12:00 IST
Last Updated 30 ಅಕ್ಟೋಬರ್ 2020, 12:00 IST
ಐಎಸ್‌ಎಲ್‌ ಲೋಗೊ
ಐಎಸ್‌ಎಲ್‌ ಲೋಗೊ   

ಮುಂಬೈ: ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ (ಐಎಸ್‌ಎಲ್‌) ಆಡುವ ಮುಂಬೈ ಸಿಟಿ ಫುಟ್‌ಬಾಲ್‌ ಕ್ಲಬ್‌ ಶುಕ್ರವಾರ ಡಿಫೆಂಡರ್‌ ಅಮೆಯ್‌ ರಣವಾಡೆ ಹಾಗೂ ಮಿಡ್‌ಫೀಲ್ಡರ್‌ ಪಿ.ಸಿ.ರೋಲುಪುಯಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

22 ವರ್ಷದ ರಣವಾಡೆ ಒಂದು ವರ್ಷದ ಒಪ್ಪಂದಕ್ಕೆ ಸಹಿ ಹಾಕಿದ್ದರೆ, 21 ವರ್ಷದ ರೋಲುಪುಯಾ ನಾಲ್ಕು ವರ್ಷ ಮುಂಬೈ ತಂಡದಲ್ಲಿ ಆಡಲಿದ್ದಾರೆ.

ಗೋವಾದ ಏಐಎಫ್‌ಎಫ್‌ ಅಕಾಡೆಮಿಯ ಪ್ರತಿಭೆ ರಣವಾಡೆ ಅವರು ಐ–ಲೀಗ್ ಟೂರ್ನಿಯಲ್ಲಿ ಡಿಎಸ್‌ಕೆ ಶಿವಾಜಿಯನ್ಸ್ ಹಾಗೂ ಮೋಹನ್‌ ಬಾಗನ್‌ ತಂಡಗಳಲ್ಲಿ ಆಡಿದ್ದಾರೆ. ಎರಡು ಅವಧಿಗೆ ಎಫ್‌ಸಿ ಗೋವಾ ತಂಡವನ್ನೂ ಅವರು ಪ್ರತಿನಿಧಿಸಿದ್ದರು.

ADVERTISEMENT

ಮುಂಬೈನ ಈ ಆಟಗಾರ ಭಾರತದ 17 ಹಾಗೂ 19 ವರ್ಷದೊಳಗಿನವರ ತಂಡದಲ್ಲಿಯೂ ಕಾಲ್ಚಳಕ ತೋರಿದ್ದಾರೆ.

ಈಸ್ಟ್‌ ಬೆಂಗಾಲ್‌ ತಂಡಕ್ಕೆ ಯೂತ್‌ ವಿಭಾಗದ ಮೂಲಕ ಪದಾರ್ಪಣೆ ಮಾಡಿದ ರೋಲುಪುಯಾ, ಅದೇ ತಂಡದ ಸೀನಿಯರ್ ವಿಭಾಗದಲ್ಲಿ 2018ರಿಂದ 2020ರ ಅವಧಿಯಲ್ಲಿ ಒಂಬತ್ತು ಪಂದ್ಯಗಳನ್ನು ಆಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.