ADVERTISEMENT

ಮುಂಬೈ ಸಿಟಿ ಎಫ್‌ಸಿಗೆ ಮೆಹತಾಬ್‌ ಸಿಂಗ್‌

ಪಿಟಿಐ
Published 24 ಅಕ್ಟೋಬರ್ 2020, 13:44 IST
Last Updated 24 ಅಕ್ಟೋಬರ್ 2020, 13:44 IST
ಐಎಸ್‌ಎಲ್‌ ಲೋಗೊ
ಐಎಸ್‌ಎಲ್‌ ಲೋಗೊ   

ಮುಂಬೈ:ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಟೂರ್ನಿಯ ಫ್ರಾಂಚೈಸ್‌ ಮುಂಬೈ ಸಿಟಿ ಫುಟ್‌ಬಾಲ್‌ ಕ್ಲಬ್‌, ಡಿಫೆಂಡರ್‌ ಮೆಹತಾಬ್‌ ಸಿಂಗ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

22 ವರ್ಷದ ಮೆಹತಾಬ್‌, ಮೂರು ವರ್ಷಗಳ ಅವಧಿಗೆ ತಂಡದೊಂದಿದೆ ಒಪ್ಪಂದ ಮಾಡಿಕೊಂಡಿದ್ದಾರೆ.

‘ಮುಂಬೈ ಸಿಟಿ ಎಫ್‌ಸಿಯಂತಹ ಪ್ರಮುಖ ತಂಡದಲ್ಲಿ ಆಡುವ ಅವಕಾಶ ಸಿಕ್ಕಿರುವುದು ದೊಡ್ಡ ಗೌರವ. ಇಲ್ಲಿ ಪರಿಶ್ರಮ ಹಾಗೂ ಕಲಿಕೆಗೆ ಆದ್ಯತೆ ನೀಡುತ್ತೇನೆ‘ ಎಂದು ಮೆಹತಾಬ್‌ ಹೇಳಿದ್ದಾರೆ.

ADVERTISEMENT

ಪಂಜಾಬ್‌ನ ಮೆಹತಾಬ್‌ ಸಿಂಗ್‌ ಅವರು 2016ರಲ್ಲಿ ಈಸ್ಟ್ ಬೆಂಗಾಲ್ ತಂಡದೊಂದಿಗೆ ಪದಾರ್ಪಣೆ ಮಾಡಿದ್ದರು. ಐ–ಲೀಗ್‌ ಟೂರ್ನಿಯ ಮೂರು ಆವೃತ್ತಿಗಳಲ್ಲಿ ಆ ತಂಡದ ಪರ ಆಡಿದ್ದಾರೆ. 2018–19ರ ಋತುವಿನ ಮಧ್ಯದಲ್ಲಿ ಗೋಕುಲಂ ಕೇರಳ ಪರವೂ ಕಣಕ್ಕಿಳಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.