ADVERTISEMENT

ಭವಿಷ್ಯ ನುಡಿದಿದ್ದ ಬೆಕ್ಕು ನಿಧನ

ಏಜೆನ್ಸೀಸ್
Published 5 ಜುಲೈ 2018, 20:18 IST
Last Updated 5 ಜುಲೈ 2018, 20:18 IST
ಅರ್ಜೆಂಟೀನಾ ಮತ್ತು ನೈಜೀರಿಯಾ ಎದುರಿನ ಪಂದ್ಯಕ್ಕೂ ಮುನ್ನ ಅರ್ಜೆಂಟೀನಾದ ಧ್ವಜದ ಮುಂದಿಟ್ಟಿದ್ದ ಬೌಲ್‌ನಲ್ಲಿನ ಆಹಾರ ಸೇವಿಸಿದ್ದ ಬೈದಿಯನರ್‌
ಅರ್ಜೆಂಟೀನಾ ಮತ್ತು ನೈಜೀರಿಯಾ ಎದುರಿನ ಪಂದ್ಯಕ್ಕೂ ಮುನ್ನ ಅರ್ಜೆಂಟೀನಾದ ಧ್ವಜದ ಮುಂದಿಟ್ಟಿದ್ದ ಬೌಲ್‌ನಲ್ಲಿನ ಆಹಾರ ಸೇವಿಸಿದ್ದ ಬೈದಿಯನರ್‌   

ಬೀಜಿಂಗ್‌: ಈ ಬಾರಿಯ ವಿಶ್ವಕಪ್‌ನ ಆರು ಪಂದ್ಯಗಳ ನಿಖರ ಭವಿಷ್ಯ ನುಡಿದು ಸುದ್ದಿಯಾಗಿದ್ದ ಬೈದಿಯನರ್‌ ಎಂಬ ಹೆಸರಿನ ಬೆಕ್ಕು ಸೋಮವಾರ ನಿಧನವಾಗಿದೆ.

ಬೀಜಿಂಗ್‌ನ ಫಾರ್ಬಿಡನ್‌ ನಗರದ ಪ್ಯಾಲೆಸ್‌ ಮ್ಯೂಸಿಯಂನಲ್ಲಿದ್ದ ಕಿತ್ತಳೆ ಬಣ್ಣದ ಈ ಬೆಕ್ಕು ಅರ್ಜೆಂಟೀನಾ ಮತ್ತು ನೈಜೀರಿಯಾ ನಡುವಣ ಪಂದ್ಯದಲ್ಲಿ ಅರ್ಜೆಂಟೀನಾ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿತ್ತು. ಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದ ಬೈದಿಯನರ್‌ ಸೋಮವಾರ ಕೊನೆಯುಸಿರೆಳೆದಿದೆ.

ಬೆಕ್ಕಿನ ಮುಂದೆ ಎರಡು ಬೌಲ್‌ಗಳಲ್ಲಿ ಆಹಾರ ಇಟ್ಟು, ಬೌಲ್‌ಗಳ ಹಿಂದೆ ತಂಡಗಳ ಧ್ವಜ ಹಾಕಲಾಗಿರುತ್ತಿತ್ತು. ಇವುಗಳ ಪೈಕಿ ಬೈದಿಯನರ್‌ ಆಹಾರ ಸೇವಿಸಿದ ಬೌಲ್‌ನ ಮುಂದಿರುವ ಬಾವುಟದ ಆಧಾರದಲ್ಲಿ ಗೆಲ್ಲುವ ತಂಡದ ಹೆಸರು ಹೇಳಲಾಗುತ್ತಿತ್ತು.

ADVERTISEMENT

ಬೈದಿಯನರ್‌ ನಿಧನಕ್ಕೆ ಚೀನಾದ ಹಲವು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.

‘ನಾನು ಫಾರ್ಬಿಡನ್‌ ನಗರಕ್ಕೆ ಹೋದಾಗಲೆಲ್ಲಾ ಪ್ಯಾಲೆಸ್‌ ಮೂಸಿಯಂಗೆ ಭೇಟಿ ನೀಡುತ್ತಿದ್ದೆ. ಆಗೆಲ್ಲಾ ಬೈದಿಯನರ್‌ ಹುಲ್ಲು ಹಾಸಿನ ಮೇಲೆ ಮಲಗಿರುತ್ತಿತ್ತು. ಅದರ ಜೊತೆ ಕೆಲ ಸಮಯ ಆಟವಾಡಿ ಫೋಟೊ ತೆಗೆದುಕೊಂಡು ಹಿಂತಿರುಗುತ್ತಿದ್ದೆ’ ಎಂದು ವ್ಯಕ್ತಿಯೊಬ್ಬರು ಚೀನಾದ ಮೈಕ್ರೊಬ್ಲಾಗಿಂಗ್‌ ವೆಬ್‌ಸೈಟ್‌ ವೀಬೊದಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.